Latestಮನರಂಜನೆ

ಟಿಕ್​ಟಾಕ್​ ಸ್ಟಾರ್​ಗೆ ಬೆದರಿಕೆ: ಪೊಲೀಸ್ ಆಯುಕ್ತರ ಮೊರೆ ಹೋದ ಯುವತಿ

ಈಗೇನಿದ್ರು ಸೋಷಿಯಲ್ ಮೀಡಿಯಾದ್ದೆ ಹವಾ. ಅದ್ರಲ್ಲೂ ಟಿಕ್​ಟಾಕ್, ಇನ್​ಸ್ಟಾಗ್ರಾಮ್​ನಂತಹ ಸಾಮಾಜಿಕ ಜಾಲಾ ತಾಣಗಳು ಅದೆಷ್ಟೋ ಮಂದಿಯನ್ನ ಸ್ಟಾರ್​​ ಪಟ್ಟಕ್ಕೇರಿಸಿ ಬಿಟ್ಟಿದೆ. ಆದರೆ ಇಂಥಹಾ ದಿಢೀರ್ ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್​ಗಳನ್ನು ಅನುಭವಿಸುತ್ತಾರೆ.

ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ ತಮ್ಮ ಟಿಕ್ ಟಾಕ್ ವಿಡಿಯೋಗಳ ಮೂಲಕ ಹೆಚ್ಚು ಜನಪ್ರಿಯರಾಗಿದ್ದರು. ಟಿಕ್ ಟಾಕ್ ಬಂದ್ ಆದ ಬಳಿಕ ಇನ್​ಸ್ಟಾಗ್ರಾಮ್​ನಲ್ಲಿ ರೀಲ್​ಗಳನ್ನ ಅಪ್​ ಲೋಡ್ ಮಾಡಿ ಶೇರ್ ಮಾಡುತ್ತಿದ್ದರು. ಇದೀಗ ಸೋನು ಗೌಡ ಇಮೇಲ್ ಮೂಲಕ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಕಿಶೋರ್ ಎಂಬ ವ್ಯಕ್ತಿ ನನ್ನ ನಕಲಿ ವಿಡಿಯೋ ಇಟ್ಟುಕೊಂಡು ನನಗೆ ಕರೆ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ. ಕಿರುಕುಳ ನೀಡುತ್ತಿದ್ದು ಆತನ ವಿರುದ್ಧ ಮೊಕದ್ದಮೆ ದಾಖಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಕಿಶೋರ್ ನಂಬರ್ ಕೂಡ ಸೋನು ಗೌಡ ಪೊಲೀಸ್ ಆಯುಕ್ತರಿಗೆ ನೀಡಿದ್ದಾರೆ.

ಇದ್ರ ಜೊತೆಗೆ ಕೆಲವು ಟ್ರೋಲ್ ಪೇಜ್​ಗಳು ಅನಗತ್ಯವಾಗಿ ಪದೇ ಪದೇ ನನ್ನ ವಿಡಿಯೋಗಳನ್ನು ಬಳಸಿಕೊಂಡು ಕೆಟ್ಟದಾಗಿ ಟ್ರೋಲ್ ಮಾಡುತ್ತಿರುತ್ತವೆ. ಈ ಟ್ರೋಲರ್​ಗಳಿಂದ ನಾನು ಮಾನಸಿಕ ಕಿರುಕುಳ, ಒತ್ತಡ ಅನುಭವಿಸುತ್ತಿದ್ದೇನೆ ಎಂದು ತಮ್ಮನ್ನ ಟ್ರೋಲ್ ಮಾಡಿದ ಪೇಜ್​ಗಳ ಲಿಂಕ್​ಗಳನ್ನು ಪೊಲೀಸರಿಗೆ ನೀಡಿದ್ದಾರೆ.

ಸೋನು ಶ್ರೀನಿವಾಸ್ ಗೌಡ ಪೊಲೀಸ್ ಆಯುಕ್ತರಿಗೆ ಕಳುಹಿಸಿರುವ ಮೇಲ್​ನ ಸ್ಕ್ರೀನ್ ಶಾರ್ಟ್​​ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೆಲವು ದುರ್ಷರ್ಮಿ ಟ್ರೋಲ್ ಪೇಜ್​ಗಳ ವಿರುದ್ಧ ಹಾಗೂ ನನ್ನ ನಕಲಿ ಸಿಡಿ, ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿರುವವರ ವಿರುದ್ಧ ದೂರು ನೀಡಿದ್ದೇನೆ ಎಂದಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button