Breaking NewsLatestಜಿಲ್ಲಾ ಸುದ್ದಿಮೈಸೂರುರಾಜಕೀಯರಾಜ್ಯಸುದ್ದಿ

ಈ ಬಾರಿ ರಾಜಕೀಯದಲ್ಲಿ ದೊಡ್ಡ ಮಟ್ಟದಲ್ಲಿ ಪಕ್ಷಾಂತರ ಆಗುವುದಿಲ್ಲ: ಜಿ ಟಿ ದೇವೇಗೌಡ

ಮೈಸೂರು : ಈ ಬಾರಿ ದೊಡ್ಡ ಮಟ್ಟದ ಪಕ್ಷಾಂತರ ಆಗುತ್ತದೆ ಎಂದು ನನಗೆ ಎನಿಸುವುದಿಲ್ಲ. ಬಿಜೆಪಿ, ಜೆಡಿಎಸ್ ಕಾಂಗ್ರೆಸ್ ಮೂರು ಪಕ್ಷಗಳು ಸಮರ್ಥವಾಗಿವೆ ಎಂದು ಮಾಜಿ ಸಚಿವ ಜಿ ಟಿ ದೇವೇಗೌಡ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ಪಕ್ಷಗಳಲ್ಲೂ ಜಿದ್ದಾಜಿದ್ದಿ ಪೈಪೋಟಿ ಇದೆ. ಹೀಗಾಗಿ ದೊಡ್ಡ ಮಟ್ಟದ ಪಕ್ಷಾಂತರ ಲಕ್ಷಣ ಕಾಣುತ್ತಿಲ್ಲ ಎಂದು ಮೂರು ಪಕ್ಷಗಳಲ್ಲಿ ಎಲ್ಲರಿಗೂ ಸ್ನೇಹಿತರಿದ್ದಾರೆ. ಹಾಗಾಗಿ ಕೆಲವರು ಕಾರ್ಡ್‌ ಆಡಲು, ಪಾರ್ಟಿಗೆ ಸೇರುತ್ತಾರೆ. ಇದರಲ್ಲೆಲ್ಲ ರಾಜಕೀಯ ಇರುವುದಿಲ್ಲ ಎಂದರು.

ಇನ್ನೂ ಚುನಾವಣೆಗೆ ಒಂದೂವರೆ ವರ್ಷ ಬಾಕಿ ಇದೆ. ಇಷ್ಟು ಬೇಗ ಪಕ್ಷಾಂತರಗಳ ಮಾತು ಏಕೆ, ಶಾಸಕರ ಲಿಸ್ಟ್ ಇದೆ ಎಂದು ಹೇಳುವವರು ಲಿಸ್ಟ್ ಬಿಡುಗಡೆ ಮಾಡಿದ್ದಾರಾ? ಹಾಗಾದರೆ ಯಾವ ಪಟ್ಟಿ ಇದೆ ಅಂತಾರೆ ಅವರನ್ನ ಬಿಡುಗಡೆ ಮಾಡಲು ಹೇಳಿ ಎಂದು ಪ್ರಶ್ನಿಸಿದರು.

ಚುನಾವಣೆ ಬೇಗ ಬರುತ್ತದೆ ಎಂಬ ಆತುರದಲ್ಲಿ ಕೆಲವರು ಹೀಗೆಲ್ಲ ಮಾತನಾಡುತ್ತಿದ್ದಾರೆ. ಕೆಲವು ಪಕ್ಷಾಂತರ ಕೊನೆ ಕ್ಷಣದಲ್ಲಿ ನಿರ್ಧಾರವಾಗುತ್ತದೆ ಆದ್ದರಿಂದ ಇಷ್ಟು ಆತುರ ಬೇಡ ಎಂದು ಜಿ ಟಿ ದೇವೇಗೌಡ ಹೇಳಿದರು.

Spread the love

Related Articles

Leave a Reply

Your email address will not be published. Required fields are marked *

Back to top button