
2020ರಲ್ಲಿ ತೆರೆ ಕಂಡಿದ್ದ ಲವ್ ಮಾಕ್ಟೇಲ್ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಯಶಸ್ಸು ಕಂಡಿತ್ತು. ಈ ಸಿನಿಮಾದ ಮೂಲಕ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರ ಚಾರ್ಮ್ ಮತ್ತಷ್ಟು ಹೆಚ್ಚಿಸಿತ್ತು. ಅಷ್ಟೇ ಅಲ್ಲದೆ ತುಂಬಾ ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಮುದ್ದಾದ ಜೊಡಿ ದಾಂಪತ್ಯ ಜೀವನಕ್ಕೂ ಕಾಲಿಟಿದ್ದರು. ಈಗ ಅವರ ಬತ್ತಳಿಕೆಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಸದ್ಯ ಲವ್ ಮಾಕ್ಟೇಲ್ ಸೀಕ್ವಲ್ ಬಿಡುಗಡೆಗೆ ಸಿದ್ಧವಾಗಿದೆ.
ಡಾರ್ಲಿಂಗ್ ಕೃಷ್ಣ ಅವರ ನಿರ್ದೇಶನದಲ್ಲಿ ಲವ್ ಮಾಕ್ಟೇಲ್ 2 ಮೂಡಿಬಂದಿದೆ. ಈಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ನಿಧಿಮಾ ನೆನಪಲ್ಲಿ ಆದಿ ಪಾತ್ರ ಕಾಲ ಕಳೆಯುತ್ತೆ. ನಂತರ ಮತ್ತೊಂದು ಮದುವೆ ಆಗುವುದಕ್ಕೆ ತೀರ್ಮಾನ ಮಾಡುತ್ತಾರೆ. ಆಮೇಲೆ ಏನಾಗುತ್ತೆ? ಅನ್ನುವುದೇ ಕಥೆಯ ಜೀವಾಂಶ ಎಂಬುದು ಟ್ರೈಲರ್ನಲ್ಲೇ ತಿಳಿಯಲಿದೆ. ಇದನ್ನು ಕಂಡ ಅಭಿಮಾನಿಗಳು ಸಿನಿಮಾದ ಮೇಲೆ ಬೆಟ್ಟದಷ್ಟು ಕುತೂಹಲ ಮೂಡಿಸಿದೆ.
ಅಂದಹಾಗೆ ಫೆ.11ಕ್ಕೆ ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ಸದ್ಯ ಕೊರೊನಾ ಹೆಚ್ಚಳದಿಂದ ಸರ್ಕಾರ ಚಿತ್ರಮಂದಿರದಲ್ಲಿ ಶೇ.50 ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ನೀಡಿದೆ. ಇದಕ್ಕೆ ಸಿನಿಮಾರಂಗದಿಂದ ವಿರೋಧ ಕೂಡ ವ್ಯಕ್ತವಾಗಿತ್ತು. ಇತ್ತೀಚೆಗೆ ವಾಣಿಜ್ಯ ಮಂಡಳಿಯಿಂದ ಸಿಎಂ ಭೇಟಿ ಮಾಡಿ ಮತ್ತು ಚಿತ್ರಮಂದಿರಗಳಿಗೆ ಶೇ. 100 ರಷ್ಟು ಆಸನಗಳಿಗೆ ಅವಕಾಶ ನೀಡುವಂತೆ ಹಲವು ಭಾರಿ ಮನವಿ ಮಾಡಿದ್ದಾರೆ.
ಈ ಮನವಿಗೆ ಸ್ಪಂದಿಸಿ ಸರ್ಕಾರ ಒಂದು ವೇಳೆ ಚಿತ್ರಮಂದಿರಗಳಿಗೆ ಶೇ 100 ಆಸನ ಭರ್ತಿಗೆ ಅವಕಾಶ ನೀಡಿದರೆ, ಇದೇ ತಿಂಗಳು ಈ ಸಿನಿಮಾ ರಿಲೀಸ್ ಆಗಲಿದೆ.



