Latestರಾಜಕೀಯರಾಷ್ಟ್ರೀಯಸುದ್ದಿ

ಪ್ರಧಾನಿ ಕ್ಷಮೆ ಕೋರಬೇಕಿಲ್ಲ : ರಾಕೇಶ್ ಟಿಕಾಯತ್

ನವದೆಹಲಿ,  ಡಿ 27 ವಿವಾದಾತ್ಮಕ ಮೂರು ಕೃಷಿ ಸುಧಾರಣಾ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ  ಕ್ಷಮೆ  ಕೋರಬೇಕೆಂದು ಬಯಸುವುದಿಲ್ಲವೆಂದು ರೈತ ನಾಯಕ ರಾಕೇಶ್  ಟಿಕಾಯಿತ್ ಹೇಳಿದ್ದಾರೆ. ವಿವಾದಾತ್ಮಕ ಮೂರು ಕೃಷಿ  ತಿದ್ದುಪಡಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ರದ್ದು ಪಡಿಸಿದ ನಂತರ, ರಾಕೇಶ್ ಟಿಕಾಯತ್ ಈ ಹೇಳಿಕೆ ಹೊರ ಬಂದಿದೆ. 

ಮೋದಿ ಕ್ಷಮೆ ಕೋರಬೇಕು ಎಂದು ರೈತ ನಾಯಕರು  ಬಯಸುವುದಿಲ್ಲ ಅದೇ ರೀತಿ ವಿದೇಶದಲ್ಲಿ ಅವರ ಬಗ್ಗೆ ಇರುವ ಸದಭಿರುಚಿ ಹಾಳು ಮಾಡಲು  ಬಯಸುವುದಿಲ್ಲ ಎಂದೂ  ಹೇಳಿದ್ದಾರೆ.

ಕೇಂದ್ರ ಸರ್ಕಾರ ರೈತರ ವಿಚಾರದಲ್ಲಿ ಇನ್ನುಮುಂದಾದರೂ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ರೈತ ನಾಯಕರೊಂದಿಗೆ ಸಮಗ್ರವಾಗಿ ಚರ್ಚೆ ಮಾಡಿ ನಂತರ ತೀರ್ಮಾನ ಮಾಡಬೇಕು ಎಂದು ನೇರವಾಗಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ರೈತರ ಹಿತ ಕಾಪಾಡಲು ಮತ್ತು ಅವರ ಆದಾಯ ದುಪ್ಪಟ್ಟು ಗೊಳಿಸಬೇಕೆಂಬ ಉದ್ದೇಶದಿಂದಲೇ ಕೇಂದ್ರ   ಸುಧಾರಣಾ ತಿದ್ದುಪಡಿ  ಕಾಯ್ದೆ ಜಾರಿಗೊಳಿಸಿತ್ತು ಆದರೆ, ನಿರಂತರ ರೈತರ ಪ್ರತಿಭಟನೆಯ ಕಾರಣ ಕೇಂದ್ರ  ಕಾಯ್ದೆ ರದ್ದುಪಡಿಸುವ ತೀರ್ಮಾನ ತೆಗೆದುಕೊಂಡಿದೆ.

ಯಾವುದೇ ಕಾರಣಕ್ಕೂ ಮರಳಿ ಈ ಮೂರು ಕಾಯ್ದೆಗಳನ್ನು ಜಾರಿಗೊಳಿಸುವುದಿಲ್ಲ, ಈ ಬಗ್ಗೆ ಕೆಲ ಮಾಧ್ಯಮಗಳಲ್ಲಿ ತಮ್ಮ ಹೇಳಿಕೆ ತಪ್ಪಾಗಿ ಪ್ರಕಟವಾಗಿದೆ. ಸಂಸತ್ತಿನಲ್ಲಿ ಕಾಯ್ದೆ ವಾಪಸ್ ಪಡೆದಿರುವಾಗ ಮತ್ತೆ ಅದನ್ನು ಜಾರಿಮಾಡುವ ಪ್ರಶ್ನೆಯೇ ಬರುವುದಿಲ್ಲ. ರೈತ ನಾಯಕರು ಈ ಕುರಿತು ಗೊಂದಲಕ್ಕೆ ಒಳಗಾಗಬೇಕಿಲ್ಲ, ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸ್ಪಷ್ಟಪಡಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button