IPL 2022Latestಕ್ರಿಕೆಟ್ಕ್ರೀಡೆ

ಸನ್ ರೈಸರ್ಸ್ ವಿರುದ್ಧ ರೋಚಕ ಗೆಲುವು ಕಂಡ ಗುಜರಾತ್ ಟೈಟಾನ್ಸ್

ವಾಂಖೆಡೆ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ತಂಡ, ಅಭಿಷೇಕ್ ವರ್ಮ (65ರನ್, 42 ಎಸೆತ, 6 ಬೌಂಡರಿ, 3 ಸಿಕ್ಸರ್) ಹಾಗೂ ಏಡೆನ್ ಮಾಕ್ರಮ್ (56ರನ್, 40 ಎಸೆತ, 2 ಬೌಂಡರಿ, 3 ಸಿಕ್ಸರ್) ಅವರ ಅದ್ಭುತ ಅರ್ಧಶತಕಗಳ ಮೂಲಕ 6 ವಿಕೆಟ್ ಗೆ 195 ರನ್ ಪೇರಿಸಿತು. ಪ್ರತಿಯಾಗಿ ಗುಜರಾತ್ ಟೈಟಾನ್ಸ್ 5 ವಿಕೆಟ್ ಗೆ 199 ರನ್ ಬಾರಿಸಿ ಗೆಲುವು ಕಂಡಿತು.

ರಶೀದ್ ಖಾನ್ 11 ಎಸೆತಗಳಲ್ಲಿ 4 ಸಿಕ್ಸರ್ ಗಳಿದ್ದ 31 ರನ್ ಸಿಡಿಸಿದರೆ, ರಾಹುಲ್ ಟೇವಾಟಿಯಾ 21 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಇದ್ದ 40 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು. ಚೇಸಿಂಗ್ ಆರಂಭಿಸಿದ ಗುಜರಾತ್ ಟೈಟಾನ್ಸ್ ತಂಡಕ್ಕೆ ನಿಯಮಿತವಾಗಿ ಉತ್ತಮ ಆರಂಭ ಸಿಕ್ಕಿತು. ಮೊದಲ ವಿಕೆಟ್ ಗೆ ವೃದ್ಧಿಮಾನ್ ಸಾಹ ಹಾಗೂ ಶುಭ್ ಮಾನ್ ಗಿಲ್ 69 ರನ್ ಗಳ ಉತ್ತಮ ಜೊತೆಯಾಟವಾಡಿದರು.

ವೃದ್ಧಿಮಾನ್ ಸಾಹ ಅವರ ಉತ್ತಮ ಬ್ಯಾಟಿಂಗ್ ಸಾಹಸ ಹಾಗೂ ಶುಭ್ ಮಾನ್ ಗಿಲ್ ಅವರ ಎಚ್ಚರಿಕೆ ಬ್ಯಾಟಿಂಗ್ ನಿಂದಾಗಿ ಎದುರಿಸಿದ ಮೊದಲ 52 ಎಸೆತಗಳಲ್ಲಿ ಈ ಜೋಡಿ 69 ರನ್ ಜೊತೆಯಾಟವಾಡಿ ತಂಡಕ್ಕೆ ಗೆಲುವಿನ ವಿಶ್ವಾಸ ನೀಡಿತ್ತು. ಕ್ರೀಸ್ ನಲ್ಲಿದ್ದ ಹಂತದಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡುವ ಮೂಲಕ ಪರದಾಟ ನಡೆಸಿದ್ದ ಶುಭ್ ಮಾನ್ ಗಿಲ್ 8ನೇ ಓವರ್ ನಲ್ಲಿ ಉಮ್ರಾನ್ ಮಲೀಕ್ ಗೆ ಬೌಲ್ಡ್ ಆಗಿ ಹೊರನಡೆದರು. ನಂತರ ವೃದ್ಧಿಮಾನ್ ಸಾಹಗೆ ಜೊತೆಯಾದ ನಾಯಕ ಹಾರ್ದಿಕ್ ಪಾಂಡ್ಯ (10) ಹೆಚ್ಚು ಹೊತ್ತು ಕ್ರೀಸ್ ನಲ್ಲಿರಲಿಲ್ಲ.

10ನೇ ಓವರ್ ನಲ್ಲಿ ಮತ್ತೆ ದಾಳಿಗಿಳಿದ ಮಲೀಕ್ 6 ಎಸೆತಗಳಲ್ಲಿ 2 ಬೌಂಡರಿಯೊಂದಿಗೆ 10 ರನ್ ಬಾರಿಸಿದ್ದ ಪಾಂಡ್ಯರನ್ನು ಔಟ್ ಮಾಡಿದರು. ಉತ್ತಮವಾಗಿ ಆಟವಾಡುತ್ತಿದ್ದ ವೃದ್ಧಿಮಾನ್ ಸಾಹ ತಂಡದ ಮೊತ್ತ 120ರ ಗಡಿ ದಾಟುತ್ತಿದ್ದಂತೆ ನಿರ್ಗಮಿಸಿದರೆ, ಉಮ್ರಾನ್ ಮಲೀಕ್ ತಾವು ಎಸೆದ ಕೊನೆಯ ಓವರ್ ನ ಸತತ ಎರಡು ಎಸೆತಗಳಲ್ಲಿ ಡೇವಿಡ್ ಮಿಲ್ಲರ್ (17) ಹಾಗೂ ಅಭಿನವ್ ಮನೋಹರ್ ವಿಕೆಟ್ ಅನ್ನು ಉರುಳಿಸಿ ಐದು ವಿಕೆಟ್ ಸಾಧನೆ ಮಾಡಿದರು.

Spread the love

Related Articles

Leave a Reply

Your email address will not be published. Required fields are marked *

Back to top button