Latestರಾಷ್ಟ್ರೀಯ

ಬಜೆಟ್ ಮಂಡನೆ ಮೊದಲು ಜನರಿಗೆ ಸಿಹಿ ಸುದ್ದಿ, ಎಲ್​ಪಿಜಿ ಸಿಲಿಂಡರ್ ಬೆಲೆ ಇಳಿಕೆ

ನವದೆಹಲಿ: ಇಂದು ಕೇಂದ್ರ ಬಜೆಟ್ ಮಂಡನೆ. ಇದಕ್ಕೂ ಮುನ್ನವೇ ಜನರಿಗೆ ಸಿಹಿ ಸುದ್ದಿ ನೀಡಿದೆ. ತೈಲ ಕಂಪನಿಯ ಕಮರ್ಷಿಯಲ್ ಸಿಲಿಂಡರ್ ಬೆಲೆಗಳನ್ನು ಇಳಿಕೆಗೊಳಿಸಿದೆ. ಆಯಾ ನಗರಗಳಿಗೆ ತಕ್ಕಂತೆ ಕಮರ್ಷಿಯಲ್ ಸಿಲಿಂಡರ್ ದರವನ್ನು ಕಡಿತಗೊಳಿಸಿದೆ.

19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್​ಗಳ ಬೆಲೆಯನ್ನು 91.50 ರೂಪಾಯಿ ಇಳಿಸಲಾಗಿದೆ. ಈ ಮೂಲಕ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್​ ಬೆಲೆ 1,907 ರೂಪಾಯಿ ಆಗಿದೆ. ಡಿಸೆಂಬರ್​ವರೆಗೂ ಒಂದೇ ಸಮನೆ ಏರಿಕೆಯಾಗುತ್ತಿದ್ದ ಕಮರ್ಷಿಯಲ್ ಸಿಲಿಂಡರ್ ಬೆಲೆ ಜನವರಿಯಲ್ಲಿ 102 ರೂಪಾಯಿ ಇಳಿಕೆಯಾಗಿತ್ತು.

ಇದೀಗ ಫೆಬ್ರವರಿಯಲ್ಲಿ ಕೂಡ ಕಡಿತಗೊಂಡಿದ್ದು ಗ್ರಾಹಕರು ಅಂದರೆ ರೆಸ್ಟೋರೆಂಟ್​, ಹೋಟೆಲ್​ ಮಾಲೀಕರಿಗೆ ನಿರಾಳತೆ ಮೂಡಿಸಿದೆ. ಡಿಸೆಂಬರ್​ 1ರಂದು 19 ಕೆಜಿ ಎಲ್​​ಪಿಜಿ ಸಿಲಿಂಡರ್​ ಬೆಲೆ 100 ರೂಪಾಯಿ ಏರಿಕೆಯಾಗಿತ್ತು.

Spread the love

Related Articles

Leave a Reply

Your email address will not be published. Required fields are marked *

Back to top button