Latestಮೆಟ್ರೋರಾಜ್ಯಸುದ್ದಿ

ರಾಜ್ಯವನ್ನು ಸುರಕ್ಷತಾ ಚಕ್ರದೊಳಗೆ ತರುವುದೇ ಗುರಿ: ಸಿಎಂ ಬೊಮ್ಮಾಯಿ

ಬೆಂಗಳೂರು : ಕೋವಿಡ್ ಸೋಂಕಿನಿಂದ ಕರ್ನಾಟಕವನ್ನು ಸುರಕ್ಷತಾ ಚಕ್ರದೊಳಗೆ ತರುವುದೇ ನಮ್ಮ ಸರ್ಕಾರದ ಗುರಿ. ಈ ಗುರಿ ಸಾಧಿಸುವ ವಿಶ್ವಾಸ ತಮಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಹೇಳಿದ್ದಾರೆ. ಸೋಮವಾರ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ ಸಹ ಅಸ್ವಸ್ಥತೆ ಹೊಂದಿರುವ ಹಿರಿಯ ನಾಗರಿಕರಿಗೆ ಮುನ್ನೆಚ್ಚರಿಕಾ ಡೋಸ್ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಲಸಿಕೆ ಕಾರ್ಯಕ್ರಮವನ್ನು ಶೇ.99 ರಷ್ಟು ಯಶಸ್ವಿಗೊಳಿಸಲಾಗಿದೆ. ಜನವರಿ 31 ರೊಳಗೆ ಶೇ.100 ರಷ್ಟು ಸಾಧನೆ ಮಾಡಲಾಗುವುದು. ಶೇ.77 ರಷ್ಟು ಎರಡನೇ ಡೋಸ್ ಆಗಿದ್ದು, ಜನವರಿ ಅಂತ್ಯಕ್ಕೆ ಶೇ.80 % ಸಾಧಿಸುವ ಗುರಿ ಇದ್ದು, ಫೆಬ್ರವರಿಯಲ್ಲಿ ಎರಡನೇ ಡೋಸ್ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಮುಟ್ಟಲಾಗುವುದು ಎಂದು ತಿಳಿಸಿದರು.

ಕೋರೋನಾ ಯೋಧರು ನಿಜವಾದ ರಕ್ಷಕರು

ಕೊರೋನಾ ಯೋಧರು ದೇಶದ ನಿಜವಾದ ರಕ್ಷಕರು. ಯೋಧರು ದೇಶ ರಕ್ಷಿಸುವಂತೆ ಕೊರೋನಾ ಯೋಧರು ದೇಶದ ಪ್ರತಿಯೊಂದು ಕುಟುಂಬವನ್ನು ರಕ್ಷಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ತವ್ಯ ನಿರ್ವಹಿಸುವಾಗ ಹಲವಾರು ತೊಂದರೆಗಳನ್ನು ಎದುರಿಸಿದರೂ, ಅವುಗಳನ್ನು ಲೆಕ್ಕಿಸದೇ ಆಶಾ ಕಾರ್ಯಕರ್ತರು, ವೈದರು, ನರ್ಸ್ ಗಳೂ ಸೇರಿದಂತೆ ಮುಂಚೂಣಿ ಕಾರ್ಯಕರ್ತರು ಅಮೋಘ ಸೇವೆ ಸಲ್ಲಿಸುತ್ತಿದ್ದು, ದೇಶದ ನಿಜವಾದ ರಕ್ಷಕರಾಗಿದ್ದಾರೆ ಎಂದು ಸಿಎಂ ಪ್ರಶಂಸಿದರು.

ಯಾವುದೇ ಕ್ರಾಂತಿಕಾರಿ ನಿರ್ಣಯಗಳು, ವಿನೂತನ ಕಾರ್ಯಕ್ರಮಗಳಿಗೆ ಸಹಜವಾಗಿ ವಿರೋಧವಿರುತ್ತದೆ. ದೇಶದಲ್ಲಿ ಲಸಿಕೆ ಬಗ್ಗೆ ಬಹಳಷ್ಟು ಪರ ವಿರೋಧ ಚರ್ಚೆಗಳಾದವು. ಯಾವುದೇ ಲಸಿಕೆ  ಸೂಕ್ತ ಪರೀಕ್ಷೆಗಳು, ಪ್ರಯೋಗಗಳು, ನಿಖರತೆಗಳನ್ನು ದೃಢಪಡಿಸಿಕೊಂಡ ನಂತರವೇ ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಗುತ್ತದೆ. ಪ್ರಾರಂಭದಲ್ಲಿ ಲಸಿಕೆ ನೀಡಿಕೆಗೆ ಹಾಗೂ ಪರೀಕ್ಷೆಗೆ ಒಳಪಡಲು ವಿರೋಧ ವ್ಯಕ್ತವಾಯಿತು. ಕೋವಿಡ್ ಗೆ ಯಾವುದೇ ಜಾತಿ ಬೇಧವಿಲ್ಲ. ನಮ್ಮಿಂದ ಬೇರೆಯವರಿಗೆ ತೊಂದರೆಯಾಗಬಾರದೆಂಬ ಭಾವನೆಯಿಂದ ಆರೋಗ್ಯ ಕಾರ್ಯಕರ್ತರಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

Spread the love

Related Articles

Leave a Reply

Your email address will not be published. Required fields are marked *

Back to top button