
ನವದೆಹಲಿ: ಉಕ್ರೇನ್ ನನ್ನು ಯುರೋಪಿಯನ್ ಒಕ್ಕೂಟದ ಸದಸ್ಯತ್ವ ನೀಡುವ ಪರವಾಗಿ ಯುರೋಪಿಯನ್ ಪಾರ್ಲಿಮೆಂಟ್ ಮಂಗಳವಾರ ಮತಹಾಕಿದೆ. ಯುರೋಪಿಯನ್ ಪಾರ್ಲಿಮೆಂಟ್, ಯುರೋಪಿಯನ್ ಒಕ್ಕೂಟ(ಇಯು)ದ ಶಾಸಕಾಂಗ ಶಾಖೆಗಳಲ್ಲಿ ಒಂದಾಗಿದೆ.
ಒಟ್ಟು 637 ಸಂಸತ್ ಸದಸ್ಯರು ಉಕ್ರೇನ್ ಬಣಕ್ಕೆ ಸೇರುವ ಪರವಾಗಿ ಮತ ಹಾಕಿದರು. ಕೇವಲ 13 ಮಂದಿ ವಿರುದ್ಧವಾಗಿ ಮತ ಹಾಕಿದರು ಮತ್ತು 26 ಮಂದಿ ಮತದಾನದಿಂದ ದೂರ ಉಳಿದರು. ಯುರೋಪಿಯನ್ ಪಾರ್ಲಿಮೆಂಟ್ ಅಧ್ಯಕ್ಷ ರಾಬರ್ಟ್ ಮೆಟ್ಸೋಲಾ , ಉಕ್ರೇನ್ ಅನ್ನು ಗುಂಪಿನ ಸದಸ್ಯರನ್ನಾಗಿ ಮಾಡುವ ನಿಟ್ಟಿನಲ್ಲಿ ಇಯು ಕೆಲಸ ಮಾಡುತ್ತದೆ ಎಂದು ಹೇಳಿದರು.
ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ನಿನ್ನ ಇಯು ಗೆ ಸೇರಲು ಅರ್ಜಿ ಸಲ್ಲಿಸಿದ್ದಾರೆ. ಯುರೋಪಿಯನ್ ಪಾರ್ಲಿಮೆಂಟ್ ನ ಮತದಾನ ಪ್ರಕ್ರಿಯೆಯಿಂದಾಗಿ ಉಕ್ರೇನ್ ತಕ್ಷಣ ಇಯು ಸದಸ್ಯ ರಾಷ್ಟ್ರವಾಗಿಸುವುದಿಲ್ಲ. ಇಯು ಗೆ ಸೇರುವುದು ಸುದೀರ್ಘ ಪ್ರಕ್ರಿಯೆಯಾಗಿರುತ್ತದೆ.
ಅರ್ಜಿದಾರ ದೇಶ, ಕೋಪನ್ ಹ್ಯಾಗನ್ ಮಾನದಂಡ ಎಂದು ಕರೆಯಲಾಗುವ ಹಲವು ಷರತ್ತುಗಳನ್ನು ಪೂರೈಸಬೇಕಾಗುತ್ತದೆ. ಇದಕ್ಕೆ ಹಲವು ತಿಂಗಳುಗಳು ಹಿಡಿಯುತ್ತವೆ. ಇಯು ವೆಬ್ ಸೈಟ್ ಪ್ರಕಾರ, ಮುಕ್ತ ಮಾರುಕಟ್ಟೆ, ಆರ್ಥಿಕತೆ, ಸ್ಥಿರ ಪ್ರಜಾಪ್ರಭುತ್ವ, ಕಾನೂನು ಪಾಲನೆ ಮತ್ತು ಯುರೋ ಕರೆನ್ಸಿ ಸೇರಿದಂತೆ ಇಯು ಶಾಸನಗಳನ್ನು ಸ್ವೀಕಾರ ಮತ್ತಿತರ ಮಾನದಂಡಗಳನ್ನು ಒಳಗೊಂಡಿರುತ್ತದೆ. ಅರ್ಜಿದಾರ ರಾಷ್ಟ್ರದ ಅರ್ಜಿಯನ್ನು ಯುರೋಪಿಯನ್ ಕೌನ್ಸಿಲ್ ಅನುಮೋದಿಸಿದ ನಂತರ ಮುಂದಿನ ಮಾತುಕತೆಗಳ ಚೌಕಟ್ಟನ್ನು ಇಯು ಸೇರಲು ಬಯಸುವ ರಾಷ್ಟ್ರ ಒಪ್ಪಿಕೊಳ್ಳಬೇಕಾಗುತ್ತದೆ.



