Breaking NewsLatestರಾಷ್ಟ್ರೀಯಸುದ್ದಿ

ಸೇನಾ ಹೆಲಿಕಾಪ್ಟರ್ ಪತನ: ಸಿಡಿಎಸ್​​ ಬಿಪಿನ್​​ ರಾವತ್​ ಪತ್ನಿ ಮಧುಲಿಕಾ ರಾವತ್​ ಸಾವು

ಕೂನೂರು (ತಮಿಳುನಾಡು): ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಸೇನಾ ಮುಖ್ಯಸ್ಥ ಬಿಪಿನ್​​ ರಾವತ್​ ಅವರ ಪತ್ನಿ ಮಧುಲಿಕಾ ರಾವತ್​ ಮೃತಪಟ್ಟಿದ್ದಾರೆ.

ಘಟನಾ ಸ್ಥಳದಲ್ಲಿ ಏಳು ಮೃತ ದೇಹಗಳು ಪತ್ತೆಯಾಗಿದ್ದು, ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಧ್ಯ ಅವರನ್ನು ಸ್ಥಳೀಯ ಆಸ್ಪತ್ರೆಯಿಂದ ಸೇನಾ ಆಸ್ಪತ್ರೆಗೆ ಅವ್ರನ್ನ ಶಿಫ್ಟ್‌ ಮಾಡಲಾಗಿದೆ. ತೀವ್ರ ಗಾಯಗೊಂಡಿರುವ ಬಿಪಿನ್​​ ರಾವತ್​ ಅವರ ಪತ್ನಿ ಮಧುಲಿಕಾ ರಾವತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವಾಯುಸೇನೆ ಅಧಿಕೃತ ಮಾಹಿತಿಯಂತೆ ದೆಹಲಿಯಿಂದ ಸೂಳೂರ್ ನಂತರ ಅಲ್ಲಿಂದ ವೆಲ್ಲಿಂಗ್ಟನ್ ಕಡೆಗೆ ಹೆಲಿಕಾಪ್ಟರ್ ಪ್ರಯಣಿಸುವಾಗ ಹವಾಮಾನ ವೈಪರೀತ್ಯಕ್ಕೊಳಗಾಗಿ ದುರಂತ ಸಂಭವಿಸಿದೆ. ಹೆಲಿಕಾಪ್ಟರ್ ಪತನಗೊಂಡ ಸ್ಥಳಕ್ಕೆ ಕನಿಷ್ಠ ಆರು ಆಂಬ್ಯುಲೆನ್ಸ್ ತಂಡಗಳನ್ನು ಕಳಿಸಲಾಗಿದೆ. ಆಸ್ಪತ್ರೆಗೆ ಕಳುಹಿಸಲಾದ ರೋಗಿಗಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.​​

ರಾವತ್ ಅವರ ನಿವಾಸಕ್ಕೆ ರಕ್ಷಣಾ ಸಚಿವವರ ಭೇಟಿ

ತಮಿಳುನಾಡಿನ ಕೂನೂರಿನಲ್ಲಿ ಸೇನಾ ಹೆಲಿಕಾಪ್ಟರ್​ ಪತನಗೊಂಡ ಬೆನ್ನಲ್ಲೇ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ನಿವಾಸಕ್ಕೆ ರಕ್ಷಣಾ ಸಚಿವ ರಾಜ​ನಾಥ್​ ಸಿಂಗ್​ ಭೇಟಿ ನೀಡಿದ್ದಾರೆ. ದೆಹಲಿಯ ಕೆ.ಕಾಮರಾಜ್​ ಮಾರ್ಗದಲ್ಲಿರುವ ನಿವಾಸಕ್ಕೆ ಭೇಟಿ ನೀಡಿದ ಅವರು ಹೆಲಿಕಾಪ್ಟರ್​ ಪತನ ಕುರಿತು ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ

Spread the love

Related Articles

Leave a Reply

Your email address will not be published. Required fields are marked *

Back to top button