Breaking NewsLatestರಾಜ್ಯಸುದ್ದಿ
ಹೋಳಿ ಹಬ್ಬದ ಬಳಿಕ ಹಿಜಾಬ್ ಕುರಿತು ಅರ್ಜಿ ವಿಚಾರಣೆ ಸುಪ್ರೀಂ ಸಮ್ಮತಿ

ಶಾಲಾ, ಕಾಲೇಜಿನ ಒಳಗೆ ಹಿಜಾಬ್ ಧರಿಸುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿ ಅರ್ಜಿಯನ್ನು ಹೋಳಿ ಹಬ್ಬದ ನಂತರ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
ಕರ್ನಾಟಕದ ಮುಸ್ಲಿಂ ವಿದ್ಯಾರ್ಥಿನಿಯರ ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರ ಅರ್ಜಿ ಸಲ್ಲಿಕೆಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತ್ವತ್ವದ ನ್ಯಾಯಪೀಠ ಪುರಸ್ಕರಿಸಿದ್ದು ಸದ್ಯದಲ್ಲಿಯೇ ಪರೀಕ್ಷೆಗಳು ಇರುವುದರಿಂದ ತುರ್ತು ವಿಚಾರಣೆ ನಡೆಸಲು ಒಪ್ಪಿಕೊಂಡಿದ್ದಾರೆ.
ಹಲವು ವಿದ್ಯಾರ್ಥಿಗಳಿಗೆ ಇದು ಪರೀಕ್ಷೆಯ ಸಮಯ. ಹೀಗಾಗಿ ಹಿಜಾಬ್ ಅರ್ಜಿಯನ್ನು ತುರ್ತಾಗಿ ನಡೆಸಬೇಕೆಂದು ಹಿರಿಯ ವಕೀಲ ಸಂಜಯ್ ಹೆಗ್ಡೆ ಸುಪ್ರೀಂ ಕೋರ್ಟ್ ನ್ಯಾಯಪೀಠದ ಮುಂದೆ ಮನವಿ ಮಾಡಿಕೊಂಡಿದ್ದಾರೆ. ವಕೀಲರ ಮನವಿಯನ್ನ ಸ್ವೀಕರಿಸಿದ ಸುಪ್ರೀ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಹೋಳಿ ಹಬ್ಬದ ನಂತರ ಅರ್ಜಿ ವಿಚಾರಣೆ ನಡೆಸೋದಾಗಿ ಹೇಳಿದ್ದಾರೆ.
