ಪವನ್ ಕಲ್ಯಾಣ್ರ ಭೀಮ್ಲಾ ನಾಯಕ್ ಟ್ರೈಲರ್ ನೋಡಿ ಸುದೀಪ್ ಅಭಿಮಾನಿಗಳು ಖುಷಿ ಪಟ್ಟಿದ್ದು ಯಾಕೆ?

ಮೂರು ವರ್ಷಗಳ ಬಳಿಕ ಪವನ್ ಕಲ್ಯಾಣ್ ನಟನೆಯ ಸಿನಿಮಾ ರಿಲೀಸ್ ಆಗ್ತಿದ್ದ ಪವನ್ ಕಲ್ಯಾಣ್ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಇದೇ ಫೆಬ್ರವರಿ 25ರಂದು ಭೀಮ್ಲಾ ನಾಯಕ್ ಸಿನಿಮಾ ರಿಲೀಸ್ ಆಗ್ತಿದ್ದು ಕಳೆದ ಮೂರು ದಿನಗಳ ಹಿಂದಷ್ಟೇ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಚಿತ್ರದ ಟ್ರೈಲರ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಚಿತ್ರದ ಟ್ರೈಲರ್ ನೋಡಿ ಸುದೀಪ್ ಅಭಿಮಾನಿಗಳು ಮಾತ್ರ ಸಖತ್ ಖುಷಿಯಾಗಿದ್ದಾರೆ.
ಭೀಮ್ಲಾ ನಾಯಕ್ ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆಗೆ ರಾಣಾ ದಗ್ಗುಬಾಟಿ ಕಾಣಿಸಿಕೊಂಡಿದ್ದಾರೆ. ಮೊದಲಿಗೆ ಈ ಪಾತ್ರದಲ್ಲಿ ನಟಿಸಲು ಚಿತ್ರತಂಡ ಸುದೀಪ್ ಅವರನ್ನ ಅಪ್ರೋಚ್ ಮಾಡಿತ್ತು. ಆದರೆ ಕೆಲವೊಂದು ಕಾರಣದಿಂದ ಸುದೀಪ್ ಭೀಮ್ಲಾ ನಾಯಕ್ ಸಿನಿಮಾದಲ್ಲಿ ನಟಿಸೋಕೆ ಸಾಧ್ಯವಾಗಿರಲಿಲ್ಲ. ಇದೀಗ ಟ್ರೈಲರ್ ನೋಡಿದ ಕಿಚ್ಚನ ಅಭಿಮಾನಿಗಳು ಸುದೀಪ್ ಈ ಸಿನಿಮಾದಲ್ಲಿ ನಟಿಸದೆ ಇದ್ದದ್ದು ಒಳ್ಳೆಯದಾಯಿತು ಅಂತಿದ್ದಾರೆ.
ಭೀಮ್ಲಾ ನಾಯಕ್ ಸಿನಿಮಾ ಮಲಯಾಳಂನ ಸೂಪರ್ ಹಿಟ್ ‘ಅಯ್ಯಪ್ಪನುಂ ಕೋಶಿಯುಂ’ ಚಿತ್ರದ ರಿಮೇಕ್. ಪೊಲೀಸ್ ಅಧಿಕಾರಿ ಹಾಗೂ ಮಾಜಿ ಸೈನಿಕನ ನಡುವಿನ ಕಥೆಯನ್ನ ಭೀಮ್ಲಾ ನಾಯಕ್ ಸಿನಿಮಾ ಒಳಗೊಂಡಿದೆ. ಮಲಯಾಳಂನಲ್ಲಿ ಪೃಥ್ವಿರಾಜ್ ಹಾಗೂ ಬಿಜು ಮೆನನ್ ನಟಿಸಿದ್ದು ಇಬ್ಬರಿಗೂ ಸಮಾನ ಅವಕಾಶ ನೀಡಲಾಗಿದೆ. ಆದರೆ ಪವನ್ ಕಲ್ಯಾಣ್ ನಟನೆಯ ಭೀಮ್ಲಾ ನಾಯಕ್ ಸಿನಿಮಾದಲ್ಲಿ ಹಾಗಾಗಿಲ್ಲ.
ಭೀಮ್ಲಾ ನಾಯಕ್ ಸಿನಿಮಾ ಸಂಪೂರ್ಣವಾಗಿ ಪವನ್ ಕಲ್ಯಾಣ್ ಮೇಲೆ ಕೇಂದ್ರಿಕೃತವಾಗಿದೆ ಅನ್ನೋದು ಟ್ರೈಲರ್ ನೋಡಿದ್ರೆ ಗೊತ್ತಾಗುತ್ತೆ. ರಾಣಾ ದಗ್ಗುಬಾಟಿ ಪಾತ್ರಕ್ಕೆ ಯಾವುದೇ ರೀತಿಯ ಸ್ಕೋಪ್ ನೀಡಿಲ್ಲ. ಪವನ್ ಕಲ್ಯಾಣ್ರ ಹೀರೋಯಿಸಂ ತೋರಿಸಲು ರಾಣಾ ಪಾತ್ರವನ್ನ ಬಳಸಿಕೊಂಡಿರೋದು ಟ್ರೈಲರ್ನಿಂದ ಗೊತ್ತಾಗುತ್ತೆ. ಹೀಗಾಗಿ ಸುದೀಪ್ ಈ ಸಿನಿಮಾದಲ್ಲಿ ನಟಿಸದ್ದೆ ಇದದ್ದೆ ಒಳ್ಳೆಯದಾಯಿತು ಅಂತಿದ್ದಾರೆ ಅಭಿಮಾನಿಗಳು.



