
ಬೆಂಗಳೂರು: ಕಳೆದ ತಿಂಗಳಿಂದ ತರಕಾರಿ ಬೆಲೆ ಗಗನಕ್ಕೇರಿತ್ತು. ಆದರೆ ಇದೀಗ ದಿಢೀರ್ ಅಂತಾ ಪಾತಾಳಕ್ಕೆ ಇಳಿದಿದೆ. ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ರೈತರು ಬೆಳೆದ ಬೆಳೆ ನಾಶವಾಗಿತ್ತು. ಇದ್ದರಿಂದ ರೈತರು ಕಂಗಾಲಾಗಿದ್ದರು.ಹೀಗಾಗಿ ಇದ್ದಕ್ಕಿದಂತೆ ತರಕಾರಿ ಬೆಲೆ ಏರಿಕೆಯಾಗಿತ್ತು. ಮಾರುಕಟ್ಟೆಗೆ ಬಂದು ಗ್ರಾಹಕರು ಬೆಲೆ ಕೇಳಿ ಶಾಕ್ ಆಗಿತ್ತು. ತರಕಾರಿ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ಗ್ರಾಹಕರು ಇದೀಗ ನಿಟ್ಟುಸಿರು ಬಿಡುವಂತಾಗಿದೆ.
ರಾಜ್ಯದಲ್ಲಿ ನಿರಂತರವಾಗಿ ಸುರಿದ ಮಳೆಯಿಂದ 3 ತಿಂಗಳು ತರಕಾರಿ ಬೆಲೆ ಇಳಿಕೆ ಆಗಿರಲಿಲ್ಲ. ತಿಂಗಳ ಬಳಿಕ ಈಗ ತರಕಾರಿ ಬೆಲೆಯಲ್ಲಿ ಕುಸಿತ ಕಂಡಿದೆ. ಇದ್ದರಿಂದ ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಿದೆ.
ಈ ಹಿಂದೆ ಒಂದು ಕೆಜಿ ಈರುಳ್ಳಿಗೆ 90 ರೂ. ಇತ್ತು. ಇದೀಗ ಪ್ರತಿ ಕೆಜಿ ಈರುಳ್ಳಿಗೆ 30 ರೂ. ಆಗಿದೆ. ಒಂದು ಕೆಜಿಗೆ 100 ರೂ. ಇದ್ದ ಬೀನ್ಸ್ ದರ 30 ರೂ. ಗೆ ಇಳಿದಿದೆ. 90 ರೂ. ಇದ್ದ ಬದನೆಕಾಯಿ ದರ 30 ರೂ.ಗೆ ಇಳಿದಿದೆ. ಒಂದು ಕೆಜಿ ಟೊಮ್ಯಾಟೋಗೆ 100 ರೂ. ಆಗಿತ್ತು. ಆದರೆ ಈಗ ಕೇವಲ 20 ರೂ. ಆಗಿದೆ. ಬೆಂಡೆಕಾಯಿ 120 ರೂ.ಗೆ ತಲುಪಿತ್ತು. ಇವಾಗ ಕೇವಲ 40 ರೂ. ಆಗಿದೆ. 80 ರೂ. ಗೆ ದಾಟಿದ್ದ ಮೂಲಂಗಿ ದರ ಇವಾಗ 20 ರೂ. ಇದೆ. ಆಲೂಗಡ್ಡೆಗೆ ಈ ಹಿಂದೆ 60 ರೂ. ಇತ್ತು. ಈಗ 30 ರೂ. ಆಗಿದೆ.
ಸೋರೆಕಾಯಿಗೆ 40 ರೂ. ಇತ್ತು. ಇವಾಗ 30 ರೂ. ದರ ಇದೆ. 80 ರೂ. ಇದ್ದ ಬೀಟ್ ರೂಟ್ ದರ 40 ರೂ.ಗೆ ತಿಳಿದಿದೆ. 50 ರೂ. ಇದ್ದ ಎಲೆಕೋಸು ದರ ಇದೀಗ 25 ರೂ.ಗೆ ಇಳಿದಿದೆ. ಕ್ಯಾಪ್ಸಿಕಮ್ 90 ರೂ ಇತ್ತು. ಈಗ 40 ರೂ. ಆಗಿದೆ. 150 ರೂ.ಗೆ ತಲುಪಿದ್ದ ನವಿಲು ಕೋಸು 40 ರೂ. ಗೆ ಇಳಿದಿದೆ.



