Latestಕಲಬುರ್ಗಿ

ಆನ್‌ಲೈನ್ ಕ್ಲಾಸ್ ಇದೆ ಅಮ್ಮಾ ಎಂದು ಕೋಣೆ ಸೇರಿದ್ದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ಕಲಬುರ್ಗಿ: ಆನ್‌ಲೈನ್ ಕ್ಲಾಸ್ ವೇಳೆ ರ್ಯಾಂಕ್ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಚಿತ್ತಾಪುರ ತಾಲೂಕು ವಾಡಿ ಪಟ್ಟಣದ ಬಿರ್ಲಾ ಕ್ವಾಟರ್ಸ್‌ನಲ್ಲಿ ನಡೆದಿದೆ.

ಆನ್‌ಲೈನ್ ಕ್ಲಾಸ್ ಇದೆ ಅಮ್ಮಾ. ನನಗೆ ಯಾರೂ ಡಿಸ್ಟರ್ಬ್ ಮಾಡ್ಬೇಡಿ ಅಂತ ರೂಮ್​ಗೆ ಹೋದ ವಿದ್ಯಾರ್ಥಿ ಗುರುಚರಣ್ ಉಡುಪಾ (17) ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ. ವಾಡಿಯಲ್ಲಿರುವ ಬೆಂಗಳೂರು ಬೇಕರಿ ವ್ಯಾಪಾರಿ ಗಿರೀಶ ಉಡುಪಾ ಅವರ ಪುತ್ರ ಗುರುಚರಣ್ ಉಡುಪಾ ಉಡುಪಿಯ ಪ್ರತಿಷ್ಠಿತ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ. ನಿನ್ನೆ ಮಧ್ಯಾನ್ಹ 3 ಗಂಟೆ ವೇಳೆಗೆ ಆನ್ಲೈನ್ ಕ್ಲಾಸ್ ಎಂದು ಮನೆಯ ಕೋಣೆಯಲ್ಲಿದ್ದ ವಿದ್ಯಾರ್ಥಿ, ರೂಮ್ ಲಾಕ್ ಮಾಡಿಕೊಂಡಿದ್ದಾನೆ. ಎರಡು ಗಂಟೆಯಾದ್ರೂ ಮಗ ಹೊರಗೆ ಬಾರದ ಕಾರಣ ಪೋಷಕರು ಬಾಗಿಲು ತಟ್ಟಿದಾಗ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಇದರಿಂದ ಗಾಬರಿಯಾದ ಪೊಷಕರು, ಕೊಣೆಯ ಬಾಗಿಲು ಮುರಿದು ನೋಡಿದಾಗ ವಿದ್ಯಾರ್ಥಿ ಪ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾನೆ.

ವಿದ್ಯಾರ್ಥಿ ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಈಗಾಗಲೇ ವಿದ್ಯಾರ್ಥಿಯ ಅಂತ್ಯಕ್ರಿಯೆ ನಡೆದಿದೆ. ವಾಡಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇದುವರೆಗೆ ದೂರು ದಾಖಲಾಗಿಲ್ಲ.

Spread the love

Related Articles

Leave a Reply

Your email address will not be published. Required fields are marked *

Back to top button