Latestಕ್ರಿಕೆಟ್ಮೆಟ್ರೋರಾಷ್ಟ್ರೀಯಸುದ್ದಿ

ಸೌರವ್ ಗಂಗೂಲಿಗೂ ಕೋವಿಡ್ ಸೋಂಕು

ಕೋಲ್ಕತ್ತಾ : ಬಿಸಿಸಿಐ ಅಧ್ಯಕ್ಷ ಹಾಗೂ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಕೋವಿಡ್ ಸೋಂಕು ತಗುಲಿದ್ದು ಚಿಕಿತ್ಸೆಗಾಗಿಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಸೌರವ್ ಗಂಗೂಲಿ ಈಗಾಗಲೇ ಎರಡು ಡೋಸ್ ಲಸಿಕೆ ಪಡೆದಿರುವುದರಿಂದ ಅವರಿಗೆ ಹೆಚ್ಚಿನ ಆರೋಗ್ಯದ ಸಮಸ್ಯೆ ಕಾಡುವ ಸಾಧ್ಯತೆ ಬಹಳ ಕಡಿಮೆ ಎನ್ನಲಾಗಿದೆ .

ಆರ್ ಟಿಪಿಆರ್ ವೈದ್ಯಕೀಯ ಪರೀಕ್ಷೆಯಲ್ಲಿ ಅವರಿಗೆ ಕೋವಿಡ್ ಸೋಂಕು ತಗುಲಿರುವುದು ಖಚಿತವಾಗಿದ್ದು ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಅವರು ಕಳೆದ ರಾತ್ರಿಯೇ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹೃದಯ ಸಂಬಂಧಿ ಖಾಯಿಲೆಗಳಿಗಾಗಿ ಇದೇ ವರ್ಷ ಸೌರವ್ ಗಂಗೂಲಿ ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು ಅವರಿಗೆ ಆಗ ತುರ್ತು ಆಂಜಿಯೋಪ್ಲಾಸ್ಟಿ ಸಹ ಮಾಡಲಾಗಿತ್ತು .

ಇದೇ ವರ್ಷದಲ್ಲಿ ಅವರ ಸಹೋದರ ಸಹ ಕೋವಿಡ್ ಸೋಮಕು ತಗುಲಿತ್ತು. ಗಂಗೋಲಿ ಆರೋಗ್ಯ ಸ್ಥಿರವಾಗಿದ್ದು ಕಳವಳ ಪಡುವಂತಿಲ್ಲ ಎಂದೂ ಆಸ್ಪತ್ರೆ ಮೂಲಗಳು ಹೇಳಿವೆ.

Spread the love

Related Articles

Leave a Reply

Your email address will not be published. Required fields are marked *

Back to top button