ಸಂಭಾವನೆಗಾಗಿ ಕೋರ್ಟ್ ಮೆಟ್ಟಿಲೇರಿದ ಶಿವಕಾರ್ತಿಕೇಯನ್

ತಮಿಳು ನಟ ಶಿವಕಾರ್ತಿಕೇಯನ್ ಸದ್ಯ ಸಾಲು, ಸಾಲು ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಪ್ರತಿಭಾರಿ ಸಿನಿಮಾಗಳ ವಿಷಯಕ್ಕೆ ಸುದ್ದಿಯಾಗೋ ನಟ ಈ ಬಾರಿ ಬೇರೆಯದ್ದೇ ವಿಷಯಕ್ಕೆ ಸದ್ದು ಮಾಡ್ತಿದ್ದಾರೆ.
ನಟ ಶಿವಕಾರ್ತಿಕೇಯನ್ ತಮ್ಮ ಹಳೆಯ ಸಿನಿಮಾವೊಂದರ ಕುರಿತಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಶಿವಕಾರ್ತಿಕೇಯನ್ ನಟನೆಯ ಮೂರು ವರ್ಷಗಳ ಹಿಂದೆ ತೆರೆಗೆ ಬಂದ ಮಿಸ್ಟರ್ ಲೋಕಲ್ ಸಿನಿಮಾದ ಕುರಿತಾಗಿ ಶಿವಕಾರ್ತಿಕೇಯನ್ ಕಾನೂನು ಮೊರೆ ಹೋಗಿದ್ದಾರೆ.
‘ಮಿಸ್ಟರ್ ಲೋಕಲ್’ ಚಿತ್ರ ರಿಲೀಸ್ ಆಗಿ ಮೂರು ವರ್ಷಗಳೇ ಆಗಿವೆ. ಆದರೆ ಸಂಭಾವನೆ ಪೂರ್ಣವಾಗಿ ಕೊಡದೆ ನಿರ್ಮಾಪಕರು ಬಾಕಿ ಉಳಿಸಿಕೊಂಡಿದ್ದಾರಂತೆ. ಈ ಹಿನ್ನೆಲೆಯಲ್ಲಿ ಸ್ಟುಡಿಯೋ ಗ್ರೀನ್ ಫಿಲಂಸ್ ನ ನಿರ್ಮಾಪಕ ಜ್ಞಾನವೇಲ್ ರಾಜಾ ವಿರುದ್ಧ ಶಿವಕಾರ್ತಿಕೇಯನ್ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಮಿಸ್ಟರ್ ಲೋಕಲ್ ಸಿನಿಮಾದಲ್ಲಿ ನಟಿಸಲು 15 ಕೋಟಿಗೆ ಮಾತುಕತೆ ನಡೆದಿತ್ತು. ಆದ್ರೆ ನಿರ್ಮಾಣ ಸಂಸ್ಥೆ 11 ಕೋಟಿ ರೂಗಳನ್ನು ಮಾತ್ರವೇ ಕೊಟ್ಟಿದ್ದು ಉಳಿದ ನಾಲ್ಕು ಕೋಟಿ ಸಂಭಾವನೆಯನ್ನ ನೀಡಿಲ್ಲ.
ಬಾಕಿ ಹಣವನ್ನ ನೀಡುವಂತೆ ಹಲವು ಬಾರಿ ಕೇಳಿದ್ದರೂ ಸಹ ನಿರ್ಮಾಣ ಸಂಸ್ಥೆ ಮಿಕ್ಕ ಸಂಭಾವನೆ ಕೊಟ್ಟಿಲ್ಲ ಎಂದು ಶಿವಕಾರ್ತಿಕೇಯನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ಮಿಸ್ಟರ್ ಲೋಕಲ್’ ಚಿತ್ರದ ನಿರ್ಮಾಪಕರು ಸಂಭಾವನೆ ಬಾಕಿ ಉಳಿಸಿಕೊಂಡಿರುವ ಹಣ ನೀಡುವವರೆಗೆ ನಿರ್ಮಾಣ ಹಂತದಲ್ಲಿರುವ ನಿರ್ಮಾಪಕರ ಚಿತ್ರಗಳನ್ನು ಬ್ಯಾನ್ ಮಾಡುವಂತೆ ನ್ಯಾಯಾಲಯಕ್ಕೆ ಶಿವಕಾರ್ತಿಕೇಯನ್ ಮನವಿ ಮಾಡಿದ್ದರು.
ಶಿವಕಾರ್ತಿಕೇಯನ್ ಅರ್ಜಿಗೆ ನಿರ್ಮಾಪಕರ ಜ್ಞಾನವೀಲ್ ರಾಜಾ ಪರವಾಗಿ ಪ್ರತ್ಯುತ್ತರ ನೀಡಿದ್ದಾರೆ. ನಟ ಶಿವಕಾರ್ತಿಕೇಯನ್ ಅವರು ‘ಮಿಸ್ಟರ್ ಲೋಕಲ್’ ಚಿತ್ರದ ಕಥೆ ಇಷ್ಟವಾಗಲಿಲ್ಲ, ಈ ಚಿತ್ರವನ್ನು ನಿರ್ದೇಶಕ ರಾಜೇಶ್ ಅವರೇ ನಿರ್ದೇಶನ ಮಾಡಲಿ ಎಂದಿದ್ದರು. ಆ ಚಿತ್ರದಿಂದ ನನಗೆ 20 ಕೋಟಿ ರೂಪಾಯಿ ನಷ್ಟವಾಗಿದೆ.ಬಾಕಿ ಉಳಿದ 2 ಕೋಟಿ 40 ಲಕ್ಷ ರೂಪಾಯಿಯನ್ನು ತೆರಿಗೆ ಸೇರಿ ಕೊಡುವಂತೆ ನಟ ಶಿವಕಾರ್ತಿಕೇಯನ್ ನಿರ್ದಾಕ್ಷಿಣ್ಯವಾಗಿ ಒತ್ತಡ ಹೇರಿದ್ದಾರೆ ಎಂದು ಉತ್ತರಿಸಿದ್ದಾರೆ.



