Latestಮನರಂಜನೆಸಿನಿಮಾಸೆಲೆಬ್ರಿಟಿಸ್ಯಾಂಡಲ್ ವುಡ್

ನಟ ಪ್ರಥಮ್ ಮಾತು ಕೇಳಿ ಬೆಚ್ಚಿ ಬಿದ್ದ ಸಿದ್ದರಾಮಯ್ಯ

ಒಳ್ಳೆ ಹುಡುಗ ಪ್ರಥಮ್ ನಿರ್ದೇಶಿಸಿ, ನಟಿಸಿರುವ ನಟ ಭಯಂಕರ ಸಿನಿಮಾದ ಫೋಸ್ಟರ್ ಬಿಡುಗಡೆಯಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ದೆಹಲಿಗೆ ಪ್ರವಾಸ ಕೈಗೊಂಡಿದ್ದರು. ಈ ಮಧ್ಯೆಯೇ ಪ್ರಥಮ್ ಸಿದ್ದರಾಮಯ್ಯ ಕೈಯಲ್ಲಿ ನಟ ಭಯಂಕರ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿಸಿದ್ದಾರೆ. ಪೊಸ್ಟರ್ ರಿಲೀಸ್ ಮಾಡಿದ ಬಳಿಕ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾರೆ.

ಇಂದು ನಟ ಪ್ರಥಮ್​ರ ಬರ್ತಡೇ. ಈ ಹಿನ್ನೆಲೆಯಲ್ಲಿ ನಟ ಭಯಂಕರ ಸಿನಿಮಾದ ಫೋಸ್ಟರ್ ರಿಲೀಸ್ ಮಾಡಲಾಗಿದೆ. ಚಿತ್ರದ ಪೋಸ್ಟರ್ ರಿಲೀಸ್ ಮಾಡುವಾಗ ನಟ ಪ್ರಥಮ್ ಮಾತು ಕೇಳಿ ಸ್ವತಃ ಸಿದ್ದರಾಮಯ್ಯ ಬೆಚ್ಚಿ ಬಿದ್ದಿದರಂತೆ.

ಪ್ರಥಮ್ ಚಿತ್ರತಂಡದ ಜೊತೆ ಸಿದ್ದರಾಮಯ್ಯ ಅವರ ಮನೆಗೆ ತೆರಳಿದ್ದರು. ಈ ವೇಳೆ ಚಿತ್ರದಲ್ಲಿ ದೆವ್ವದ ಪಾತ್ರ ಮಾಡಿದವರು ಕೂಡ ಇದ್ದರು. ಈ ವೇಳೆ ಪ್ರಥಮ್ ಸಿದ್ದರಾಮಯ್ಯ ಅವರಿಗೆ ಸರ್ ಅವರ ಪಕ್ಕ ನಿಲ್ಲಬೇಡಿ, ಅವಳು ದೆವ್ವ ಎಂದಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅವರು ಒಮ್ಮೆ ಗಾಬರಿ ಆಗಿ ಬಿಟ್ಟಿದ್ದಾರೆ. ಬಳಿಕೆ ಪ್ರಥಮ್ ಅವಳು ಸಿನಿಮಾದಲ್ಲಷ್ಟೇ ದೆವ್ವ ಎಂದು ಹೇಳಿದ್ದಾರೆ.

ರಾಮನ ಭಕ್ತ ಹನುಮಂತ ಹಾಗೂ ದೆವ್ವದ ನಡುವೆ ನಡೆಯುವ ಕಾಳದ ಪೋಸ್ಟರ್ ಅನ್ನು ಸಿದ್ದರಾಮಯ್ಯ ಬಿಡುಗಡೆ ಮಾಡಿ ಖುಷಿ ಪಟ್ಟಿದ್ದಾರೆ. ಜೊತೆಗೆ ನಿನ್ನ ಡೈರೆಕ್ಷನ್​ನ ಸಿನಿಮಾ ಎಂದರೆ ಪೂರ್ತಿಯಾಗಿ ನೋಡುವುದಾಗಿ ಭರವಸೆ ನೀಡಿದ್ದಾಗಿ ನಟ ಪ್ರಥಮ್ ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button