
ಮುಂಬೈ: ಪ್ರಧಾನಮಂತ್ರಿ ನರೇಂದ್ರ ಮೋದಿ ಆಡಳಿತ ವೈಖರಿ ಬಗ್ಗೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಹಾಡಿಹೊಗಳಿದ್ದಾರೆ. ಮೋದಿ ಒಬ್ಬ ಛಲಗಾರ, ಹಿಡಿದ ಕೆಲಸವನ್ನು ಪಟ್ಟು ಬಿಡದೆ ಸಾಧಿಸುವ ಕಲೆ ಅವರಲ್ಲಿದೆ ಎಂದು ಹೊಗಳಿದ್ದಾರೆ. ಯಾವುದೇ ಕೆಲಸಕ್ಕೂ ಹೆಚ್ಚು ಪ್ರಯತ್ನ ಮಾಡುತ್ತಾರೆ.ಅದನ್ನು ಕಾರ್ಯಗತಗೊಳಿಸಲು ಹೆಚ್ಚಿನ ಸಮಯಾವಕಾಶವನ್ನೂ ಮೀಸಲಿಡುತ್ತಾರೆ ಇಂತಹ ಗುಣಗಳು ಸಾಮಾನ್ಯವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ ಎಂದು ಹೇಳಿದ್ದಾರೆ.
ಒಬ್ಬರ ಶ್ರಮ ಸಾಕಾಗಲ್ಲ
ಮರಾಠಿ ನಿಯತಕಾಲಿಕೆ ಲೋಕಸತ್ತಾ ಪತ್ರಿಕಾ ಕಾರ್ಯಕ್ರಮದಲ್ಲಿ ಮಾತನಾಡಿದ ಶರದ್ ಪವರ್, ಮೋದಿಯವರಲ್ಲಿ ಯಾವ ಬದಲಾವಣೆ ಕಾಣುತ್ತೀರಿ, ಬಯಸುತ್ತೀರಿ ಎಂಬ ಪ್ರಶ್ನೆಗೆ, ಸರ್ಕಾರದ ಆಡಳಿತ ತೆಗೆದುಕೊಳ್ಳುವ ನಿರ್ಧಾರಗಳು ಸಾಮಾನ್ಯ ಜನರ ಆಕಾಂಕ್ಷೆಯೊಂದಿಗೆ ಹೊಂದಿಕೆಯಾಗಿದ್ದರೆ ಒಬ್ಬರ ಕಠಿಣ ಪರಿಶ್ರಮ ಸಾಕಾಗುವುದಿಲ್ಲ.
ಪರಿಣಾಮಕಾರಿ ಆಡಳಿತ ಜಾರಿಗೆ ಸಹೋದ್ಯೋಗಿಗಳು ಹೇಗೆ ಒಂದುಗೂಡಬೇಕು, ಹೇಗೆ ಕೆಲಸ ಮಾಡಬೇಕು ಎಂಬುದನ್ನು ಮೋದಿಯಿಂದ ಕಲಿಯಬೇಕು. ಅವರ ಹಿಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಲ್ಲಿ ಇಂತಹ ಕಾರ್ಯಶೈಲಿ ವರ್ತನೆ ಕಾಣಸಿಗುವುದಿಲ್ಲ ಎಂದೂ ಪವಾರ್ ಅಭಿಪ್ರಾಯಪಟ್ಟಿದ್ದಾ



