Breaking NewsLatestಕಲಬುರ್ಗಿಜಿಲ್ಲಾ ಸುದ್ದಿ

ಶೀಘ್ರದಲ್ಲಿ ಶಾಲಾ- ಕಾಲೇಜು ಪ್ರಾರಂಭ : ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ

ಕಲಬುರಗಿ: ಹಿಜಾಬ್ ಪ್ರಕರಣ ನ್ಯಾಯಾಲಯದಲ್ಲಿ ಇರೋದಕ್ಕೂ ಶಾಲಾ ಕಾಲೇಜು ಪ್ರಾರಂಭಕ್ಕೂ ಸಂಬಂಧವಿಲ್ಲ ಕಾಲೇಜುಗಳು ಶೀಘ್ರದಲ್ಲಿ ಪ್ರಾರಂಭ ಆಗಲಿವೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಹೇಳಿದ್ದಾರೆ‌.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ನೋಡಿಕೊಂಡು ಶೀಘ್ರದಲ್ಲಿ ಕಾಲೇಜುಗಳು ಪ್ರಾರಂಭ ಮಾಡುತ್ತೇವೆ‌‌‌‌. ಸದ್ಯ ಆನ್ ಲೈನ್ ಕ್ಲಾಸ್ ಗಳು ನಡೆಯುತ್ತಿವೆ. ಗೃಹ ಇಲಾಖೆ ಸಲಹೆ ಮೇರೆಗೆ ಶೀಘ್ರದಲ್ಲಿ ಕಾಲೇಜುಗಳು ಪ್ರಾರಂಭಿಸಲಾಗುತ್ತದೆ‌ ಎಂದರು.

ಸುಸ್ತಿಕರಣ ರಾಜಕೀಯ ಬಿಜೆಪಿ ಮಾಡುವುದಿಲ್ಲ:

ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಬಿಜೆಪಿ ಹಿಜಾಬ್ ವಿವಾದ ಮಾಡುತ್ತಿದೆ ಎನ್ನುವ ಬಸವರಾಜ್ ರಾಯರೆಡ್ಡಿ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು,, ಹಿಜಾಬ್ ವಿಚಾರದಲ್ಲಿ ಯಾರು ರಾಜಕೀಯ ಪ್ರೇರಿತವಾಗಿ ಮಾತಾಡ್ತಿದ್ದಾರೆ ಅನ್ನೋದು ಮಾಧ್ಯಮಗಳಿಗೆ ಗೊತ್ತಿದೆ. ಸುಸ್ತಿಕರಣ ರಾಜಕೀಯ ಬಿಜೆಪಿ ಮಾಡೋದಿಲ್ಲ ಎಂದು ತಿರುಗೇಟು ನೀಡಿದರು.

ತಪ್ಪಿತಸ್ಥರ ವಿರುದ್ದ ಕ್ರಮ:

ಬಿಡಿಎ ಸೈಟ್ ಹಂಚಿಕೆ ಹಗರಣದಲ್ಲಿ ಯಾರೆ ಭಾಗಿಯಾಗಿದರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ತನಿಖೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದು ಸರ್ಕಾರ ಹಗರಣದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button