Latestಮನರಂಜನೆಸಿನಿಮಾಸ್ಯಾಂಡಲ್ ವುಡ್

ಗಿರಿಕನ್ಯೆ ಜಯಮಾಲಾಗೆ ಇಂದು ಹುಟ್ಟುಹಬ್ಬದ ಸಂಭ್ರಮ

ಸ್ಯಾಂಡಲ್ ವುಡ್ ನಟಿ ಜಯಮಾಲಾ ಅವರಿಗೆ ಇಂದು ಹುಟುಹಬ್ಬದ ಸಂಭ್ರಮ. ಅವರು 63ನೇ ವಸಂತಕ್ಕೆ ಕಾಲಿಟಿದ್ದಾರೆ. ಗಿರಿಕನ್ಯೆ, ಶಂಕರಗುರು, ಪ್ರೇಮದ ಕಾಣಿಕೆ ಹೀಗೆ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿ ಸೈಎನಿಸಿಕೊಂಡಿದ್ದಾರೆ.

1959, ಫೆಬ್ರವರಿ 28 ರಂದು ಜಯಮಾಲಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿದರು.ಇವರು ಮೊದಲು ಕನ್ನಡ ನಟ ಟೈಗರ್ ಪ್ರಭಾಕರ್ ಅವರೊಂದಿಗೆ ಮದುವೆಯಾಗಿದ್ದರು. ಪ್ರಸ್ತುತ ಸಿನಿಮಾಫೋಟೋಗ್ರಾಫರ್ ಎಚ್.ಎಮ್.ರಾಮಚಂದ್ರ ರವರೊಂದಿಗೆ ವಿವಾಹವಾಗಿದ್ದಾರೆ. ಇವರ ಪುತ್ರಿ ಸೌಂದರ್ಯ ಜಯಮಾಲ ಕನ್ನಡ ಚಿತ್ರರಂಗದ ಯುವ ನಟಿ.

ಜಯಮಾಲಾ 80 ರ ದಶಕದಲ್ಲಿ ಪ್ರಮುಖ ನಾಯಕನಟಿಯಾಗಿ ಮಿಂಚಿದ್ದರು.ನಂತರ ನಿರ್ಮಾಪಕಿಯಾಗಿ ಹಲವು ಪ್ರಶಸ್ತಿ ವಿಜೇತ ಚಿತ್ರಗಳನ್ನು ನಿರ್ಮಿಸಿದ್ದಾರೆ.

ಕನ್ನಡ ಮಾತ್ರವಲ್ಲದೇ,ತುಳು,ತಮಿಳು,ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಕೂಡ ನಟಿಸಿದ್ದಾರೆ.ಇವರು ನಿರ್ಮಿಸಿದ ಮೊದಲ ಚಿತ್ರ ತಾಯಿ ಸಾಹೇಬ’ ರಾಷ್ಟ್ರ ಪ್ರಶಸ್ತಿ ಪಡೆಯಿತು.

Spread the love

Related Articles

Leave a Reply

Your email address will not be published. Required fields are marked *

Back to top button