ದುನಿಯಾ ವಿಜಯ್ ನಿರ್ದೇಶನದಲ್ಲಿ ಮತ್ತೊಂದು ಹೊಸ ಸಿನಿಮಾ

ದುನಿಯಾ ವಿಜಯ್ ನಿರ್ದೇಶನದ ಸಲಗ ಸಿನಿಮಾ ರಿಲೀಸ್ ಆಗಿ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಮಾಸ್ ಸಿನಿಮಾವನ್ನು ಎಲ್ಲರೂ ಮೆಚ್ಚುಕೊಂಡಿದ್ದರು. ಇದೀಗ ವಿಜಯ್ ಮುಂದೇನು ಮಾಡುತ್ತಾರೆ ಎಂಬ ಕೂತುಹಲ ಅಭಿಮಾನಿಗಳಲ್ಲಿ ಮೂಡಿದೆ. ಇದಕ್ಕೆ ದುನಿಯಾ ವಿಜಯ್ ಅವರು ಉತ್ತರ ಕೊಟ್ಟಿದೆ.
ಹೌದು ಕಳೆದ ವರ್ಷ ಸೂಪರ್ ಹಿಟ್ ಸಲಗ ನಂತರ ದುನಿಯಾ ವಿಜಯ್ ಈಗ ಮತ್ತೊಂದು ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಚಿತ್ರದಲ್ಲಿ ಅವರೇ ನಿರ್ದೇಶನ ಮಾಡಿ ನಟಿಸಲಿದ್ದಾರೆ.
ಸಲಗ ನಂತರ ಅವರು ತೆಲುಗು ಬಾಲಕೃಷ್ಣ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಡಿತ್ತು. ನಂತರ ಅವರು ಕನ್ನಡದ ಹೊಸ ಕಥೆಯೊಂದು ರೆಡಿಯಾಗಿದೆ. ಶಿವರಾತ್ರಿಗೆ ಈ ಸಿನಿಮಾ ಅನೌನ್ಸ್ ಆಗಲಿದೆ.
ಅಂದಹಾಗೆ ಈ ಬಾರಿ ಯುವ ಜನಾಂಗದ ಸಮಸ್ಯೆ, ಕುಟುಂಬದಲ್ಲಿ ಉಂಟಾಗುವ ತೊಡಕುಗಳು, ಸಾಮಾಜಿಕವಾಗಿ ಚರ್ಚೆಯಾಗುತ್ತಿರುವ ಹಾಟ್ ಟಾಪಿಕ್ ಇವುಗಳನ್ನೆಲ್ಲಾ ಇಟ್ಟುಕೊಂಡು ಕಥೆ ಹೆಣೆದಿದ್ದಾರೆ.ಈ ಚಿತ್ರದಲ್ಲಿ ಸಂಗೀತ ನಿರ್ದೇಶಕ ಚರಣ್ ರಾಜ್, ಛಾಯಾಗ್ರಾಹಕ ಶಿವು ಸೇನಾ ಅವರು ಕಾರ್ಯನಿರ್ವಹಿಸುವ ಸಾಧ್ಯತೆ
ಮಹಾಭಾರತದಲ್ಲಿ ಬರುವ ಪಾತ್ರದ ಹೆಸರೊಂದನ್ನು ಈ ಚಿತ್ರಕ್ಕೆ ಇಟ್ಟಿದ್ದಾರಂತೆ. ಶಿವರಾತ್ರಿ ಹಬ್ಬದಂದು ಫಸ್ಟ್ ಲುಕ್‌ನಲ್ಲಿ ಟೈಟಲ್ ರಿವೀಲ್ ಮಾಡಲಿದ್ದಾರಂತೆ



