Latestಮನರಂಜನೆಸಿನಿಮಾಸೆಲೆಬ್ರಿಟಿ
ಏರ್ ಪೋರ್ಟ್ ನಲ್ಲಿ ಸಮಂತಾ ಸಖತ್ ಸ್ಟೆಪ್; ವಿಡಿಯೋ ಸಿಕ್ಕಾಪಟ್ಟೆ ವೈರಲ್

ನಟಿ ಸಮಂತಾ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರದಲ್ಲಿ ಹೂ ಅಂತೀಯಾ ಮಾವ..ಊಹೂ ಅಂತಿಯಾ ಮಾವ ಹಾಡಿಗೆ ಸಖತ್ ಆಗಿ ಸೊಂಟ ಬಳಕಿಸಿ ಪಡ್ಡೆಹುಡುಗರನ್ನು ಕೆರಳಿಸಿದ್ದರು. ಅವರು ನಟನೆಯ ಜೊತೆ ಡ್ಯಾನ್ಸ್ ಮೂಲಕವೇ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.
ಅವರು ಹಾಕೋ ಸ್ಟೆಪ್ ಗೆ ಪಡ್ಡೆಹೈಕಳು ಹುಚ್ಚೆದ್ದು ಕುಣಿಯುತ್ತಾರೆ. ಅಷ್ಟೇ ಅಲ್ಲದೇ ಅವರ ಡ್ಯಾನ್ಸ್ ನೋಡುವುದಕ್ಕೆ ಅಭಿಮಾನಿಗಳು ಕಾಯುತ್ತ ಇರುತ್ತಾರೆ. ಇದೀಗ ಅವರ ಮತ್ತೊಂದು ಡ್ಯಾನ್ಸ್ ವಿಡಿಯೋ ವೈರಲ್ ಆಗಿದೆ.
ಹೌದು ಸಮಂತಾ ಅವರು ಏರ್ ಪೋರ್ಟ್ ನಲ್ಲಿ ಸ್ಟೆಪ್ ಹಾಕಿರೋ ಹೊಸ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಇದನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಮಂತಾಗೆ ಮಧ್ಯರಾತ್ರಿ ಫ್ಲೈಟ್ ಇತ್ತು. ಈ ಸಂದರ್ಭದಲ್ಲಿ ಅವರು ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ.



