Breaking NewsLatestವಿದೇಶಸುದ್ದಿ

ಉಕ್ರೇನ್‍ನ ಅತೀ ದೊಡ್ಡ ಅಣುಸ್ಥಾವರದ ಮೇಲೆ ರಷ್ಯಾ ದಾಳಿ

ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ ವಾರ ಕಳೆದಿದ್ದು ಯುದ್ಧ ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾ ಉಕ್ರೇನ್​ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸುತ್ತಲೇ ಇದೆ. ಇದೀಗ ಯುರೋಪ್​ನಲ್ಲಿಯೇ ಅತಿ ದೊಡ್ಡದಾದ ಉಕ್ರೇನ್​ನಲ್ಲಿರುವ ಝಪೊರಿಝಿಯಾ ಪರಮಾಣು ವಿದ್ಯುತ್ ಸ್ಥಾವರವನ್ನ ರಷ್ಯಾ ಸೈನಿಕರು ಉಡೀಸ್ ಮಾಡಿದ್ದಾರೆ.

ಯುರೋಪ್‌ನಲ್ಲಿಯೇ ಅತಿ ದೊಡ್ಡದಾದ ಉಕ್ರೇನ್‌ನಲ್ಲಿರುವ ಝಪೊರಿಝಿಯಾ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶುಕ್ರವಾರ ಮುಂಜಾನೆ 3 ಗಂಟೆ ಸುಮಾರಿಗೆ ರಷ್ಯಾ ಸೈನಿಕರಿಂದ ಝಪೊರಿಝಿಯಾ ಅಣುಸ್ಥಾಪವರದ ಮೇಲೆ ದಾಳಿ ನಡೆದಿದೆ. ಉಕ್ರೇನ್ ವಿದೇಶಾಂಗ ಸಚಿವ ದಾಳಿ ಕುರಿತಂತೆ ಕಳವಳ ವ್ಯಕ್ತಪಡಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button