Breaking NewsLatestರಾಷ್ಟ್ರೀಯವಿದೇಶಸುದ್ದಿ

ಉಕ್ರೇನ್ ಪ್ರದೇಶ ಮತ್ತು ಗಡಿಗಳು ಬದಲಾಗದು: ಉಕ್ರೇನ್ ವಿಶ್ವಾಸ

ಮಾಸ್ಕೋ: ಉಕ್ರೇನ್ ಮತ್ತು ರಷ್ಯಾ ನಡುವಿನ ಬಿಕ್ಕಟ್ಟು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಚರ್ಚೆಯಾಗಲಿದೆ. ಈ ಸಂಬಂಧ ನ್ಯೂಯಾರ್ಕ್ ನಲ್ಲಿ ಹೇಳಿಕೆ ನೀಡಿರುವ ವಿಶ್ವಸಂಸ್ಥೆಯಲ್ಲಿ ಉಕ್ರೇನ್ ಖಾಯಂ ಪ್ರತಿನಿಧಿಯಾಗಿರುವ ಸೆರ್ಗಿ ಕಿಸ್ಲಾಟ್ಯಾ ಅವರು, ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ವಿಷಯ ಪ್ರಸ್ತಾಪಿಸಲಾಗುವುದು ಎಂದಿದ್ದಾರೆ.  

ವಿಶ್ವಸಂಸ್ಥೆಗೆ ಉಕ್ರೇನ್ ನ ಖಾಯಂ ಪ್ರತಿನಿಧಿ ಸೆರ್ಗಿ ಕಿಸ್ಲಿಟ್ಯಾ ಅವರು, ರಷ್ಯಾದ ಕ್ರಮಗಳ ಹೊರತಾಗಿಯೂ ತಮ್ಮ ದೇಶದ ಎಲ್ಲಾ ಪ್ರದೇಶ ಮತ್ತು ಗಡಿ ಯಥಾಸ್ಥಿತಿಯಲ್ಲಿ ಉಳಿಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪೂರ್ವ ಉಕ್ರೇನ್ ನ ಪ್ರತ್ಯೇಕತಾವಾದಿ ಡೆನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶಗಳ ಸ್ವಾತಂತ್ರ್ಯವನ್ನು ಗುರುತಿಸುವ ನಿರ್ಧಾರದ ಫಲಿತಾಂಶಗಳಿಗೆ ರಷ್ಯಾ, ಸಂಪೂರ್ಣ ಜವಾಬ್ದಾರಿ ಎಂದು ಅವರು ಆರೋಪಿಸಿದರು.

ಈ ನಡುವೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೋಮವಾರ ದೂರದರ್ಶನದ ಭಾಷಣದಲ್ಲಿ ಪೂರ್ವ ಉಕ್ರೇನ್ ನಲ್ಲಿ ಎರಡು ಬಂಡುಕೋರರ ಹಿಡಿತದಲ್ಲಿರುವ ಪ್ರದೇಶಗಳನ್ನು ಗುರುತಿಸಿದ್ದರು. ಸ್ವತಂತ್ರ ರಾಜ್ಯಗಳೆಂದು ಔಪಚಾರಿಕವಾಗಿ ಅಂಗೀಕರಿಸಿದ ನಂತರ ಎರಡು ಪ್ರಾಂತ್ಯಗಳಿಗೆ ಶಾಂತಿಪಾಲನಾ ಪಡೆಗಳನ್ನು ರವಾನಿಸಲು ಆದೇಶಿಸಿದ್ದರು.

ಏತನ್ಮಧ್ಯೆ ಉಕ್ರೇನ್ ನ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಮಂಡಳಿಯ ತುರ್ತು ಸಭೆಯ ನಂತರ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕ್, ಉಕ್ರೇನ್ನ ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟಿರುವ ಗಡಿಗಳು ಬದಲಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 
Spread the love

Related Articles

Leave a Reply

Your email address will not be published. Required fields are marked *

Back to top button