Breaking NewsLatestರಾಷ್ಟ್ರೀಯ
ರಷ್ಯಾ-ಉಕ್ರೇನ್ ನಡುವೆ ಬಿಕ್ಕಟ್ಟು; ಬಿಯರ್ ಬೆಲೆ ಏರಿಕೆ

ರಷ್ಯಾ ಮತ್ತು ಉಕ್ರೇನ್ ನಡುವೆ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ. ಇದೀಗ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದ ಆರ್ಥಿಕವಾಗಿ ತತ್ತರಿಸಿ ಹೋಗಿದೆ. ರಷ್ಯಾ-ಉಕ್ರೇನ್ ಬಿಕ್ಕಟ್ಟು ತೀವ್ರಗೊಂಡಂತೆ, ಅದರ ಪರಿಣಾಮ ವಿವಿಧ ಪ್ರದೇಶಗಳಲ್ಲಿ ಬೀರುತ್ತಿದೆ.
ಇನ್ನು ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ದ ಅಂತ್ಯಗೊಳ್ಳದಿದ್ದರೆ ಮಾರುಕಟ್ಟೆಯಲ್ಲಿ ಬಿಯರ್ ಬೆಲೆ ಗಗನಕ್ಕೇರುವ ಸಾಧ್ಯತೆಗಳಿವೆ. ರಷ್ಯಾ ಬಾರ್ಲಿ ಬಿಯರ್ ಗಳ ಅತಿದೊಡ್ಡ ಉತ್ಪಾದನೆ ಮಾಡುವ ರಾಷ್ಟ್ರವಾಗಿದೆ. ಇನ್ನೂ ಉಕ್ರೇನ್ ಬಾರ್ಲಿ ಉತ್ಪಾದಿಸುವ ನಾಲ್ಕನೇ ಅತಿದೊಡ್ಡ ಉತ್ಪಾದಕ ಕೇಂದ್ರವಾಗಿದೆ. ಹೀಗಾಗಿ ವರ್ಷಕ್ಕೆ 180 ಮಿಲಿಯನ್ ಟನ್ ಬಾರ್ಲಿಯನ್ನು ಉತ್ಪಾದಿಸುತ್ತದೆ. ಹೀಗಿರುವಾಗ ಸದ್ಯದಲ್ಲಿಯೇ ಬಿಯರ್ ಬೆಲೆಗಳು ಹೆಚ್ಚಾಗುವ ನಿರೀಕ್ಷೆಯಿದೆ.
