Latestಜಿಲ್ಲಾ ಸುದ್ದಿರಾಮನಗರ

ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದ ನೊಂದ ಕುಟುಂಬ

ರಾಮನಗರ: ರಸ್ತೆಯನ್ನು ಸಂಪೂರ್ಣ ಮುಚ್ಚಿ ಮನೆ ಒಳಗೆ ಹೋಗದಂತೆ ಸುತ್ತಲೂ ನಿರ್ಬಂಧವಿಧಿಸಿರುವ ಕಾರಣ ಮನೆಯನ್ನು ತೊರೆದಿರುವ ನೊಂದ ಕುಟುಂಬ ಮನೆಗೆ ರಸ್ತೆಯನ್ನು ಬಿಡಿಸಿಕೊಡಿ ಇಲ್ಲವೆ ದಯಾಮರಣ ನೀಡಿ ಎಂದು ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ಮನವಿ ಮಾಡಿದೆ.

ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಹೋಬಳಿ ದೊಡ್ಡಮುದುವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತಿಕುಂಟೆ ಗ್ರಾಮದ ಕೃಷ್ಣಮೂರ್ತಿಯ ಕುಟುಂಬ ದಯಾಮರಣಕ್ಕೆ ಮುಂದಾಗಿರುವ ಕುಟುಂಬವಾಗಿದ್ದು, ವೀರೆಗೌಡನದೊಡ್ಡಿ ಗ್ರಾಮದವರಾದ ಕೃಷ್ಣಮೂರ್ತಿ ಅವರು ಮತ್ತಿಕುಂಟೆ ಗ್ರಾಮದಲ್ಲಿ 1992 ರಲ್ಲಿ ಗಿರೀಗೌಡ ಎಂಬುವರಿಂದ ನಿವೇಶನ ಖರೀದಿಸಿ 1993 ರಲ್ಲಿ ಮನೆ ಕಟ್ಟಿಕೊಂಡಿದ್ದಾರೆ. 1998 ರ ತನಕ ಚೆನ್ನಾಗಿದ್ದ ಅಕ್ಕಪಕ್ಕದವರು ನಂತರ ರಸ್ತೆಯಲ್ಲಿ ಓಡಾಡುವ ವಿಚಾರವಾಗಿ ತಗಾದೆ ತೆಗೆದು ಮನೆಯ ದಕ್ಷಿಣ ಭಾಗಕ್ಕಿದ್ದ ರಸ್ತೆಯನ್ನು ಮುಚ್ಚಿ ತೊಂದರೆ ನೀಡಿದ್ದಾರೆ.

ನಂತರದಲ್ಲಿ ಮನೆಯ ಉತ್ತರ ಭಾಗದಲ್ಲಿದ್ದ ಖಾಲಿ ನಿವೇಶನವನ್ನು 2005 ರಲ್ಲಿ ಖರೀದಿ ಮಾಡಿ ರಸ್ತೆ ಸಂಪರ್ಕ ಪಡೆದುಕೊಂಡು, ಆ ಜಾಗವು ತಮಗೆ ಬರಬೇಕೆಂದು ಅಕ್ಕ-ಪಕ್ಕದವರು ಬೇಲಿ ಹಾಕಿಕೊಂಡಿದ್ದಾರೆ. ಅಂತಿಮವಾಗಿ ಮನೆಗೆ ಬರಲು ಇದ್ದ ಎಲ್ಲಾ ಅವಕಾಶಗಳು ಬಂದ್ ಆಗಿದ್ದರಿಂದ ದಾರಿ ಕಾರಣದೆ ಕುಟುಂಬ 2005 ರಲ್ಲಿ ಮನೆ ಖಾಲಿ ಮಾಡಿಕೊಂಡು ಬೆಂಗಳೂರಿಗೆ ವಲಸೆ ಹೋಗಿದೆ. ಕುಟುಂಬಕ್ಕೆ ಆಗಿದ್ದ ಅನ್ಯಾಯವನ್ನು ಸಹಿಸಿಕೊಂಡು ಬಿ.ಕಾಂ. ಪಧವಿದರನಾಗಿ ಸಿನಿಮಾ ಇಂಡಸ್ಟ್ರಿನಲ್ಲಿ ರೈಟರ್ ಕಂ. ಕೋ.ಡೈರೆಕ್ಟರ್ ಆಗಿರುವ ಕೃಷ್ಣಮೂರ್ತಿ ಅವರ ಪುತ್ರ ವಿಶ್ವನಾಥ್.ವಿ.ಕೆ ತಮ್ಮ ಮನೆಗೆ ರಸ್ತೆಯನ್ನು ಬಿಡಿಸಿಕೊಡುವಂತೆ 2020 ರಲ್ಲಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ತಹಶೀಲ್ದಾರ್ ಅವರಿಗೆ ಮನವಿಯನ್ನು ಸಲ್ಲಿಸಿದ್ದರು.

ಸಂಬಂಧಪಟ್ಟವರಿಂದ ಯಾವುದೆ ಪರಿಹಾರ ದೊರೆಯದಿದ್ದಾಗ, ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾಡಳಿತಕ್ಕೆ ದೂರು ನೀಡಿ ತಾವು ೩೮ ವರ್ಷಗಳ ಹಿಂದೆ ಕಟ್ಟಿ ವಾಸ ಮಾಡುತ್ತಿದ್ದ ಮನೆಗೆ ಇದ್ದ ರಸ್ತೆಯನ್ನು ಉದ್ದೇಶ ಪೂರ್ವಕವಾಗಿ ಮುಚ್ಚಿದ್ದು ಅದನ್ನು ಬಿಡಿಸಿಕೊಡುವಂತೆ ಮಗ ಹೋರಾಟ ನಡೆಸಿದ್ದು, ಅದರಿಂದ ಯಾವುದೇ ಪ್ರಯೋಜನವಾಗಿಲ್ಲವೆಂದು ನೊಂದ ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.

ತಾಲ್ಲೂಕು ಆಡಳಿತ, ಜಿಲ್ಲಾಡಳಿಕ್ಕೆ ಮನವಿ ಮಾಡಿ ಹೋರಾಟ ನಡೆಸಿದರೂ ಗ್ರಾಮ ಪಂಚಾಯಿತಿಯವರು ಯಾವುದೇ ಕ್ರಮ ಕೈಗೊಂಡಿಲ್ಲ. ಹೋರಾಟ ನಡೆಸುವ ವೇಳೆ ತಾವು ಮಾಡಬೇಕಿದ್ದ ಕೆಲಸಕ್ಕೂ ಹೋಗದೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಜೀವನಕ್ಕೆ ಆಸರೆಯಾಗಿದ್ದ ಮನೆಗೂ ರಸ್ತೆಯಿಲ್ಲದೆ ಇಲ್ಲಿ ಜೀವನ ಮಾಡುವುದು ಕಷ್ಟವಾಗಿದೆ. ಅದಕ್ಕಾಗಿ ಇಡೀ ಕುಟುಂಬ ದಯಾಮರಣಕ್ಕೆ ಮುಂದಾಗಿದ್ದೇವೆ ಎನ್ನುತ್ತಾರೆ ವಿಶ್ವನಾಥ್.ವಿ.ಕೆ. ಒಬ್ಬ ವ್ಯಕ್ತಿ ಬದುಕಲು ಬೇಕಿರುವ ಎಲ್ಲಾ ಅವಕಾಶಗಳನ್ನು ಕಾನೂನಿಡಿ ಸಂವಿಧಾನಬದ್ದ ಹಕ್ಕುಗಳನ್ನು ಕೊಡುತ್ತದೆ. ಗ್ರಾಮ ಪಂಚಾಯಿತಿ ಎಲ್ಲಾ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕಿದೆ. ಆದರೆ ತಾವು ವಾಸಿಸುವ ಮತ್ತಿಕುಂಟೆ ಗ್ರಾಮದಲ್ಲಿ ಅಕ್ಕಪಕ್ಕದವರಾದ ಮಾಗಡಿಗೌಡರ ಕುಟುಂಬದವರಾದ ವೆಂಕಟೇಶ್, ಶ್ರೀನಿವಾಸ್, ಉದಯರಂಗ, ತಿಮ್ಮೇಗೌಡ, ರಜಿನಿಕಾಂತ್, ತೊಂದರೆ ಕೊಡುತ್ತಿದ್ದಾರೆ ಎಂಬುದು ಕೃಷ್ಣಮೂರ್ತಿ ಕುಟುಂಬದ ಆರೋಪವಾಗಿದೆ.

ಇದರಿಂದ ನೊಂದಿರುವ ಕೃಷ್ಣಮೂರ್ತಿ, ಪತ್ನಿ ಭಾಗ್ಯಮ್ಮ, ಮಗ ವಿಶ್ವನಾಥ್, ಸೊಸೆ ಚೈತ್ರ, ಮೊಮ್ಮಕ್ಕಳಾದ ಚರಿತ, ರೋಚನ್ ದಯಾಮರಣಕ್ಕೆ ಅರ್ಜಿ ಹಾಕಿಕೊಂಡವರಾಗಿದ್ದಾರೆ. ತಾವು ಗೌರವಯುತ ಬದುಕು ಸಾಗಿಸಲು ಮನೆಗೆ ಬರುವ ರಸ್ತೆಯನ್ನು ತೆರವುಗೊಳಿಸಿ, ಮನೆಯಲ್ಲಿ ನೀರು ನಿಲ್ಲದಂತೆ ಚರಂಡಿ ಮಾಡಬೇಕೆಂದು ಕುಟುಂಬವು ಒತ್ತಾಯವಾಗಿದೆ.

ಮತ್ತಿಕುಂಟೆ ಗ್ರಾಮದಲ್ಲಿ ವಿಶ್ವನಾಥ.ವಿ.ಕೆ. ಅವರ ಮನೆಗೆ ಇದ್ದ ದಕ್ಷಣಿ ಭಾಗದ ರಸ್ತೆ ಸಂಪರ್ಕ ಕಡಿತವಾಗಿರುವುದು ತಮ್ಮ ಗಮನಕ್ಕೆ ಬಂದಿದ್ದು ಉತ್ತರ ಭಾಗದಲ್ಲಿ ತಾತ್ಕಲಿಕ ರಸ್ತೆಯನ್ನು ಮಾಡಿದ್ದೇವೆ. ಸಿಇಒ ಅವರಿಂದ ವಿಶೇಷ ಅನುಮತಿ ಪಡೆದು ನರೇಗಾದಲ್ಲಿ ಕಾಂಕ್ರೀಟ್ ಹಾಕಲಾಗುವುದು. ದಕ್ಷಿಣ ಭಾಗದಲ್ಲಿ ಚರಂಡಿಯನ್ನು ಮಾಡಿ ನೀರು ಹೋಗುವಂತೆ ಮಾಡಲಾಗುವುದು ಎಂದು ದೊಡ್ಡಗಂಗವಾಡಿ ಪಿಡಿಒ ಎಂ.ಎ. ಲೋಕೇಶ್ ಸ್ಪಷ್ಟಪಡಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button