Latestಮನರಂಜನೆಸಿನಿಮಾ

ವ್ಯಾಲೆಂಟೈನ್ಸ್​ ಡೇ ಮುನ್ನವೇ ದಾಂಪತ್ಯಕ್ಕೆ ಅಂತ್ಯ ಹಾಡಿದ ಹಾಟ್ ಬೆಡಗಿ ರಾಖಿ ಸಾವಂತ್

ನಟಿ ರಾಖಿ ಸಾವಂತ್ ಅವರು ತಮ್ಮ ದಾಂಪತ್ಯ ಕುರಿತು ಸಾಕಷ್ಟು ವಿವಾದಕ್ಕೆ ಸಿಲುಕಿದ್ದರು. ಈ ವಿಚಾರವಾಗಿ ಅವರು ಆಗಾಗ ಸುದ್ದಿಯಲ್ಲಿ ಇರುತ್ತಿದ್ದರು. ಇನ್ನು ಹಿಂದಿ ಬಿಗ್ ಬಾಸ್ ನಿಂದಲೇ ಸಾಕಷ್ಟು ಪ್ರಚಾರ ಗಿಟ್ಟಿಸಿಕೊಂಡಿದ್ದ ರಾಖಿ ಸಾವಂತ್ ಅವರು ವೈಯಕ್ತಿಕ ಜೀವನದಲ್ಲಿ ಬಹಳಷ್ಟು ಏಳು- ಬೀಳು ಗಳನ್ನು ಕಂಡಿದ್ದಾರೆ.

ರಾಖಿ ಸಾವಂತ್ ಅವರ ಮದುವೆ ಕುರಿತು ಸಾಕಷ್ಟು ಗುಸು ಗುಸು ಶುರುವಾಗಿತ್ತು. ಅವರು ಯಾರನ್ನು ಮದುವೆಯಾಗಿದ್ದಾರೆ ಎಂಬುದು ಎಲ್ಲೂ ಬಹಿರಂಗ ಪಡಿಸಿಕೊಂಡಿರಲಿಲ್ಲ. ಆದರೆ ಬಿಗ್​ಬಾಸ್ ಸೀಸನ್ ನಲ್ಲಿ ಅವರು
ಈ ವಿಚಾರವನ್ನು ಬಿಚ್ಚಿಟ್ಟರು. ಇದನ್ನು ಕೇಳಿದ ರಾಖಿ ಸಾವಂತ್ ಅಭಿಮಾನಿಗಳು ಖುಷಿ ಪಡುವುದರೊಳಗೆ ಮತ್ತೊಂದು ಸುದ್ದಿ ಹೊರಗೆ ಬಿದ್ದಿದೆ.

ದಾಂಪತ್ಯ ಜೀವನಕ್ಕೆ ರಾಖಿ ಸಾವಂತ ಅವರು ಅಂತ್ಯ ಹಾಡಿದ್ದಾರೆ.ಪತಿ ರಿತೇಶ್ ಅವರಿಂದ ತಾವು ಬೇರ್ಪಟ್ಟಿರುವ ವಿಷಯವನ್ನು ಸೋಶಿಯಲ್ ಮೀಡಿಯಾ ಮೂಲಕ ಅವರು ತಿಳಿಸಿದ್ದಾರೆ.‌ ವ್ಯಾಲೆಂಟೈನ್ ಡೇ ಆಚರಣೆಗೂ ಒಂದು ದಿನ ಮುನ್ನವೇ ರಾಖಿ ಸಾವಂತ ಅವರು ಪತಿಯಿಂದ ವಿಚ್ಛೇದನವಾಗಿದೆ.

ಅಂದಹಾಗೆ ಬಿಗ್ ಬಾಸ್ 15 ರಲ್ಲಿ ವೈಲ್ಡ್​ ಕಾರ್ಡ್ ಎಂಟ್ರಿ ಮೂಲಕ ರಾಖಿ ಸಾವಂತ್ ಮತ್ತು ಅವರ ಪತಿ ರಿತೇಶ್ ಭಾಗವಹಿಸಿದ್ದರು. ಬಿಗ್ ಬಾಸ್ ಮುಗಿದ ಬಳಿಕ ಸದ್ಯಕ್ಕೆ ನಾವು ಜಸ್ಟ್ ಫ್ರೆಂಡ್ಸ್ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಈಗ ಸಂಪೂರ್ಣವಾಗಿ ಗಂಡನ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳಲು ರಾಖಿ ಸಾವಂತ್​ ನಿರ್ಧರಿಸಿದ್ದಾರೆ.ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

ವ್ಯಾಲೆಂಟೈನ್ಸ್​ ಡೇ ದಿನಕ್ಕೂ ಮುನ್ನವೇ ಈ ರೀತಿ ಆಗಿದ್ದರ ಬಗ್ಗೆ ನನಗೆ ತೀವ್ರ ಬೇಸರವಿದೆ. ಆದರೆ ಇಂಥ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯ ಆಗಿತ್ತು. ನಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಿದೆವು. ಆದರೆ ನಾವು ದೂರವಾಗುವುದೇ ಉತ್ತಮ ಎನಿಸಿತು. ನನ್ನ ಆರೋಗ್ಯ ಮತ್ತು ವೃತ್ತಿಜೀವನದ ಬಗ್ಗೆ ನಾನು ಗಮನ ಹರಿಸಬೇಕು. ರಿತೇಶ್​ಗೆ ಒಳ್ಳೆಯದಾಗಲಿ ಅಂತ ಹಾರೈಸುತ್ತೇನೆ’ ಎಂದು ರಾಖಿ ಸಾವಂತ್​ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button