Latestಕೃಷಿತುಮಕೂರುರಾಜ್ಯಸುದ್ದಿ

ಬಂಡೆ ಮೇಲೆ ಭತ್ತ ಬೆಳೆಯುವ ರೈತ

ತುಮುಕೂರು: ಬಂಡೆ ಮೇಲೆ ಭತ್ತ ಬೆಳೆಯುವ ರೈತನೊಬ್ಬ ಜನರ ಗಮನ ಸೆಳೆದಿದ್ದಾನೆ. ಕೃಷಿಯಲ್ಲಿ ಅಪಾರ ಆಸಕ್ತಿ ಹೊಂದಿರುವ ಅರುಣಕುಮಾರ್‌ ಅವರೇ ಈ ಸಾಧನೆ ಮಾಡಿರುವುದು. ಮೂಲತಃ ಚಿಕ್ಕನಾಯಕನಹಳ್ಳಿ ತಾಲೂಕು ಶೆಟ್ಟಿಕೆರೆ ಗ್ರಾಮದ ಅರುಣಕುಮಾರ್‌ ಎಸ್‌.ಆರ್‌ ಬಿಎಸ್‌ಸಿ ಪದವಿ ಪಡೆದ ಮೇಲೆ ಕೃಷಿ ಮಾಡಲು ಆರಂಭಿಸಿದರು.

ಒಟ್ಟು 7 ಎಕರೆ 33 ಗುಂಟೆ ಜಮೀನನ್ನು ಹೊಂದಿದ್ದು, 33 ಗುಂಟೆಯಲ್ಲಿ ಬಂಡೆಯಿದ್ದು ಕೃಷಿಗೆ ಯೋಗ್ಯವಾಗಿರಲಿಲ್ಲ ಆದರಿಂದ ಡೈನಾಮೆಟ್‌ ಹಾಕಿ ಬಂಡೆಯನ್ನು ಹೊಡೆದು, ನೇಗಿಲಿಗೆ ಬಂಡೆ ಸಿಗದಷ್ಟು ಅದರ ಮೇಲೆ 2 ಅಡಿ ಮಣ್ಣು ಹೊಡೆಸಿ ಒಂದು ಭಾಗದಲ್ಲಿ ಮಲೆನಾಡಿನ ಬೆಳೆಗಳನ್ನು ಬೆಳೆದಿದ್ದಾರೆ, 400 ತೆಂಗು, 1500 ಅಡಕೆ, 700 ಮೆಣಸು, ವೆನಿಲ್ಲಾ, ಕಾಫಿ, ಏಲಕ್ಕಿ, ಜೀರಿಗೆ, ಮಿಡಿಮಾವು, ಅರಿಶಿನ, ನಿಂಬೆ, ಹಲಸು, ನೆಲ್ಲಿರಾಮಫಲ, ಸೀಬೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ತೋಟದ ಸುತ್ತಲೂ ಗೊಬ್ಬರದ ಗಿಡ,ತೇಗ, ಹೆಬ್ಬೇವು, ಸಿಲ್ವರ್‌ಓಕ್‌, ಹರ್‌ಕ್ಯುಲೆಸ್‌ ಮರಗಳಿವೆ. ಇನ್ನೊಂದು ಭಾಗದಲ್ಲಿ 300 ಶ್ರೀಗಂಧ, 250 ರಕ್ತಚಂದನ, 250 ಹೆಬ್ಬೇವು, 100 ಮಹಾಗನಿ, ದೇಶ ವಿದೇಶಗಳ ಬೆಳೆಗಳಾದ ಕಾಶ್ಮೀರ ಸೇಬು, ಖರ್ಜೂರ, ಅಂಜೂರ, ಸಪೋಟ, ಲಕ್ಷ್ಮಣ ಫಲ, ಡ್ರಾಗನ್‌ ಫä›ಟ್‌, ಚಕ್ಕೋತ, ಕಿತ್ತಳೆ, ಮೋಸಂಬಿ, ಬಾದಾಮಿ ಬೆಳೆದಿದ್ದಾರೆ. ಹಾಗು ಇನ್ನೋದು ಭಾಗದಲ್ಲಿ ಮನೆಗೆ ಬೇಕಾದ ಆಹಾರ ಧಾನ್ಯಗಳಾದ ರಾಗಿ, ಅವರೆ, ಹೆಸರು, ಉದ್ದು, ತರಕಾರಿಗಳನ್ನು ಬೆಳೆಯುತ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button