ಹಲವು ನಗರಗಳಲ್ಲಿ ನಡೆಯಲಿದೆ ಜೇಮ್ಸ್ ಪ್ರೀ ರಿಲೀಸ್ ಕಾರ್ಯಕ್ರಮ

ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಟನೆಯ ಕೊನೆಯ ಸಿನಿಮಾ ಜೇಮ್ಸ್ಗಾಗಿ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯ್ತಿದ್ದಾರೆ. ಈಗಾಗ್ಲೆ ಚಿತ್ರದ ಟೀಸರ್ಗೆ ಅಭೂತ ಪೂರ್ವ ರೆಸ್ಪಾನ್ಸ್ ಸಿಕ್ಕಿದ್ದು ಮಾರ್ಚ್ 17ರಂದು ಸಿನಿಮಾ ರಿಲೀಸ್ ಆಗಲಿದೆ. ಈ ಮಧ್ಯೆ ಚಿತ್ರತಂಡ ಅದ್ದೂರಿಯಾಗಿ ಹಲವು ಕಡೆ ಚಿತ್ರದ ಪ್ರೀರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡಿದೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹಾಗೂ ನಿರ್ದೇಶನ ಚೇತನ್ ಕಾಂಬಿನೇಷನ್ನ ಜೇಮ್ಸ್ ಸಿನಿಮಾದ ಮೇಲೆ ಎಲ್ಲಿಲ್ಲದ ನಿರೀಕ್ಷೆ ಇದೆ. ಜೇಮ್ಸ್ ಪುನೀತ್ ನಟನೆಯ ಕೊನೆಯ ಸಿನಿಮಾ ಅನ್ನೋದು ಒಂದು ಕಡೆಯಾದ್ರೆ, ಹಿಂದೇದು ಕಾಣಿಸಿಕೊಂಡಿರದ ಪಾತ್ರಕ್ಕೆ ಅಪ್ಪು ಬಣ್ಣ ಹಚ್ಚಿದ್ದಾರೆ ಅನ್ನೋದು ಜೇಮ್ಸ್ ಚಿತ್ರದ ನಿರೀಕ್ಷೆ ದುಪ್ಪಟ್ಟಾಗೋಕೆ ಕಾರಣವಾಗಿದೆ.
ಜೇಮ್ಸ್ ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ರೆ ಈ ಚಿತ್ರವನ್ನ ದೇಶದೆಲ್ಲೆಡೆ ಸಿನಿ ಪ್ರೇಮಿಗಳಿಗೆ ತಲುಪಿಸುವ ಕಾರ್ಯ ಮಾಡಲು ಚಿತ್ರತಂಡ ಮುಂದಾಗಿದೆ. ಜೇಮ್ಸ್ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮವನ್ನು ದೇಶದ ಕೆಲವು ಪ್ರಮುಖ ನಗರಗಳಲ್ಲಿ ನಡೆಸಲು ಚಿತ್ರತಂಡ ಮುಂದಾಗಿದೆ.
ಬೆಂಗಳೂರು, ಬಳ್ಳಾರಿಯ ಹೊಸಪೇಟೆ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಲಿದೆ. ಈ ಮೂರು ಕಾರ್ಯಕ್ರಮಗಳಿಗೆ ಡಾ.ರಾಜ್ಕುಮಾರ್ ಕುಟುಂಬ ಸೇರಿದಂತೆ ಚಿತ್ರರಂಗದ ಸಾಕಷ್ಟು ಕಲಾವಿದರು ಭಾಗವಹಿಸಲಿದ್ದಾರೆ.
ಹೈದರಾಬಾದ್, ಚೆನ್ನೈ ಹಾಗೂ ಮುಂಬೈ ನಗರಗಳಲ್ಲೂ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಆಯಾ ರಾಜ್ಯದ ಪ್ರಮುಖ ನಟ, ನಟಿಯರನ್ನ ಆಹ್ವಾನಿಸಲು ಚಿತ್ರತಂಡ ನಿರ್ಧರಿಸಿದೆ. ಇದ್ರ ಜೊತೆಗೆ ಅಪ್ಪು ಅಭಿಮಾನಿಗಳು ಕೂಡ ಚಿತ್ರವನ್ನ ಆಹ್ವಾನಿಸಲು ಸಜ್ಜಾಗಿದ್ದಾರೆ.
ಬೆಂಗಳೂರಿನ ವಿರೇಶ್ ಚಿತ್ರಮಂದಿರದ ಬಳಿ ಪುನೀತ್ ನಾಯಕ ನಟನಾಗಿ ನಟಿಸಿರುವ 31 ಚಿತ್ರಗಳ ಬೃಹತ್ ಕಟೌಟ್ ಹಾಕಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಎಲ್ಲಾ ಕಟೌಟ್ಗಳಿಗೂ ಬಾರಿ ಹೂವಿನ ಹಾರ ಹಾಕಿ ಹೆಲಿಕ್ಯಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲು ನಿರ್ಧರಿಸಲಾಗಿದೆ. ಮಾರ್ಚ್ 18ರ ಬೆಳಗ್ಗೆ ಸಿಹಿ ವಿತರಣೆ, ಮಧ್ಯಾಹ್ನ ಅನ್ನದಾನ ಹಾಗೂ ಸಂಜೆ ದೀಪೋತ್ಸವ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ. ಇದ್ರ ಜೊತೆಗೆ ಮಾರ್ಚ್ 19ರಂದು ಅನ್ನದಾನ, ನೇತ್ರದಾನ , ನೇತ್ರ ತಪಾಸಣೆ, ರಕ್ತದಾನ ಶಿಬಿರ ಹಾಗೂ ಮಾರ್ಚ್20ಕ್ಕೆ ಚಿಕ್ಕನ್ ಬಿರಿಯಾನಿ ಹಂಚಿಕೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.



