Breaking NewsLatestರಾಜಕೀಯರಾಷ್ಟ್ರೀಯ

ಡಿಮಾನಿಟೈಸೇಷನ್ ಒಂದು ಕೇಡು; ಐದು ವರ್ಷವಾದರೂ ಭ್ರಷ್ಟಾಚಾರವೇಕೆ ಕೊನೆಗೊಂಡಿಲ್ಲ?: ಪ್ರಿಯಾಂಕಾ ಗಾಂಧಿ

ನವದೆಹಲಿ: ಐನೂರು ಮತ್ತು ಸಾವಿರ ರೂ. ಮೌಲ್ಯದ ನೋಟುಗಳನ್ನು ಅಮಾನ್ಯ ಮಾಡಿದ್ದ ಡಿಮಾನಿಟೈಸೇಷನ್ ಒಂದು ಕೇಡಿನ ನಡೆಯೆಂದು ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ಎಸ್ ಟೀಕಿಸಿವೆ.

ಡಿಮಾನಿಟೈಸೇಷನ್ಸಫಲವಾಗಿದ್ದಲ್ಲಿ, ಅದಾಗಿ ಐದು ವರ್ಷಗಳೇ ಕಳೆದರೂ ಭ್ಷ್ಟಾಚಾರವೇಕೆ ಕೊನೆಯಾಗಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.

ಟ್ವೀಟ್ ಮಾಡಿರುವ ಅವರು, ಕಪ್ಪು ಹಣ ಏಕೆ ವಾಪಸ್ ಬರಲಿಲ್ಲ? ಆರ್ಥಿಕತೆ ಏಕೆ ನಗದು ರಹಿತವಾಗಿಲ್ಲ? ಭಯೋತ್ಪಾದನೆ ಏಕೆ ದಮನಗೊಂಡಿಲ್ಲ? ಹಣದುಬ್ಬರವನ್ನು ಏಕೆ ನಿಯಂತ್ರಿಸಲಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ತೃಣಮೂಲ ಕಾಂಗ್ರೆಸ್ ಕೂಟ ಡಿಮಾನಿಟೈಸೇಷನ್ ಬಗ್ಗೆ ಟೀಕೆ ಮಾಡಿದೆ. ಟಿಎಂಸಿ ನಾಯಕ ಡೆರೆಕ್ ಒಬ್ರಿಯಾನ್ ಡಿಮಾನಿಟೈಸೇಷನ್ ಜಾರಿಗೆ ಬಂದಿದ್ದ ನವೆಂಬರ್ 8ನ್ನು ಕಪ್ಪು ದಿನ ಎಂದು ಕರೆದಿದ್ದಾರೆ. 2016ರಿಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾಡಿರುವ ಟ್ವೀಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಡೆರೆಕ್ ಹಂಚಿಕೊಂಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button