Breaking NewsLatestಜಿಲ್ಲಾ ಸುದ್ದಿರಾಜಕೀಯರಾಮನಗರ

ಸಿಎಂ ಸಮ್ಮುಖದಲ್ಲೇ ಸಚಿವ ಅಶ್ವತ್ಥನಾರಾಯಣ ಹಾಗೂ ಸಂಸದ ಡಿ ಕೆ ಸುರೇಶ್ ನಡುವೆ ಜಟಾಪಟಿ..!

ರಾಮನಗರ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದ್ದ ವೇದಿಕೆಯ ಮೇಲೆಯೆ ಅಭಿವೃದ್ಧಿ ವಿಷಯದಲ್ಲಿ ಸಚಿವ ಅಶ್ವತ್ಥನಾರಾಯಣ ಹಾಗೂ ಸಂಸದ ಡಿ ಕೆ ಸುರೇಶ್ ನಡುವೆ ಕೈಕೈ ಮಿಲಾಸಿರುವ ಘಟನೆ ರಾಮನಗರದಲ್ಲಿ ನಡೆದಿದೆ.

ಅಂಬೇಡ್ಕರ್ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮವನ್ನು ಬಿಜೆಪಿ ಸರ್ಕಾರದಿಂದ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಸೇರಿದಂತೆ ಸಂಸದ ಡಿ.ಕೆ.ಸುರೇಶ್ ಕೂಡ ಭಾಗವಹಿಸಿದ್ದರು. ನೀರಾವರಿ ಯೋಜನೆಯು ಬಿಜೆಪಿ ಸರ್ಕಾರದಿಂದ ಸಾಧ್ಯ. ನಮ್ಮ ಸರ್ಕಾರದಿಂದಲೇ ಅನೇಕ ಯೋಜನೆಯನ್ನು ಜಿಲ್ಲೆಯಲ್ಲಿ ನೆರವೇರಿಸದಾಗಿ ಎಂಬುದಾಗಿ ವೇದಿಕೆಯ ಕಾರ್ಯಕ್ರಮದ ಆರಂಭದಲ್ಲಿ ಸಚಿವ ಅಶ್ವತ್ಥನಾರಾಯಣ ತಿಳಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಸಂಸದ ಡಿ.ಕೆ.ಸುರೇಶ್, ಸಚಿವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು. ಜೊತೆಗೆ ವೇದಿಕೆಯಲ್ಲೇ ಸಂಸದ ಡಿಕೆ ಸುರೇಶ್ ಧರಣಿ ಕುಳಿತರು. ಸಿಎಂ ಸಮ್ಮುಖದಲ್ಲೇ ಧರಣಿ ಕುಳಿತ ಅವರನ್ನು ಸಿಎಂಗೆ ಅವಮಾನ ಮಾಡುತ್ತಿದಾರಾ ಸಿಎಂ ಕಾರ್ಯಕ್ರಮಕ್ಕೆ ಅಗೌರವ ತೋರುತ್ತಿದ್ದೀರಾ ಎಂಬುದಾಗಿ ಸಚಿವ ಅಶ್ವತ್ಥನಾರಾಯಣ ಕಿಡಿಕಾರಿದರು.

ಇದರಿಂದಾಗಿ ಕಾರ್ಯಕ್ರಮದ ವೇದಿಕೆಯಲ್ಲೇ ಮಾತಿನ ವಾಕ್ ಸಮರ ಉಂಟಾಗಿ, ಸಚಿವರು ಹಾಗೂ ಸಂಸದರ ನಡುವೆ ಗಲಾಟೆಯೇ ನಡೆಯಿತು. ಈ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ ಮಧ್ಯಪ್ರವೇಶಿಸಿ ನಿಮ್ಮ ಜಿಲ್ಲೆಗೆ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಮುಂದೆಯೂ ಒಳ್ಳೆಯ ಯೋಜನೆಗಳು ನೀಡುವ ಭರವಸೆ ನೀಡಿದರು. ಆಗ ಕೊಂಚ ಪರಿಸ್ಥಿತಿ ತಿಳಿಗೊಂಡಿತು.

Spread the love

Related Articles

Leave a Reply

Your email address will not be published. Required fields are marked *

Back to top button