Latestಜಿಲ್ಲಾ ಸುದ್ದಿಮೈಸೂರು

ಮೈಸೂರಿನಿಂದ ಮೇಕೆದಾಟು ಪಾದಯಾತ್ರೆ ಹೊರಟಿದ್ದ ಕಾಂಗ್ರೆಸ್ ನಾಯಕರ ಮೇಲೆ ಕೇಸ್ ದಾಖಲು

ಮೈಸೂರು ; ಮೈಸೂರಿನಿಂದ ಮೇಕೆದಾಟು ಪಾದಯಾತ್ರೆ ಕೈಗೊಂಡಿದ್ದ ಕಾಂಗ್ರೆಸ್ ನಾಯಕರ ಮೇಲೆ ದೂರು ದಾಖಲಾಗಿದೆ. ಜನವರಿ 11 ರಂದು ನಗರದಲ್ಲಿ ಸಾಂಕೇತಿಕವಾಗಿ ಪಾದಯಾತ್ರೆ ಕೈಗೊಂಡು ಮೇಕೆದಾಟುವಿಗೆ ಹೊರಟಿದ್ದ ಕಾಂಗ್ರೆಸ್​​ ಶಾಸಕರು, ಮಾಜಿ ಶಾಸಕರು, ಕಾಂಗ್ರೆಸ್ ಜಿಲ್ಲಾಧ್ಯಕ್ಷರ ವಿರುದ್ಧ ನಗರದ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಜ.13ರಂದು ಪ್ರಕರಣ ದಾಖಲಾಗಿದೆ.

ಶಾಸಕ ಹೆಚ್​​​ಪಿ,ಮಂಜುನಾಥ್ ಸೇರಿದಂತೆ ಇತರ ಕಾಂಗ್ರೆಸ್ ನಾಯಕರ ವಿರುದ್ದ ಕೇಸ್ ದಾಖಲಾಗಿದೆ. ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ -2020 ಅನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಹುಣಸೂರು ಶಾಸಕ ಎಚ್.ಪಿ. ಮಂಜುನಾಥ್(ಎ1), ಮಾಜಿ ಶಾಸಕ ವಾಸು(ಎ2), ನಂಜನಗೂಡು, ಮಾಜಿ ಶಾಸಕ ಕಳಲೆ ಕೇಶವಮೂರ್ತಿ(ಎ3), ವಿಧಾನ ಪರಿಷತ್​ ಮಾಜಿ ಸದಸ್ಯ ಆರ್. ಧರ್ಮಸೇನ(ಎ4), ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್(ಎ5), ಕಾಂಗ್ರೆಸ್ ಮುಖಂಡ ಶ್ರೀನಾಥ್ ಬಾಬು (ಎ6) ಹಾಗೂ ಇತರೆ 20 ಮಂದಿ ವಿರುದ್ಧ ಸೆಕ್ಷನ್ 5(4), ಸೆಕ್ಷನ್ 6, ಸೆಕ್ಷನ್ 4, ಸೆಕ್ಷನ್ 51, ಸೆಕ್ಷನ್ 188 ಐಪಿಸಿ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button