ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಯಾವುದೇ ಟೀಕೆ-ಟಿಪ್ಪಣಿಗಳು ಬೇಕಾಗಿಲ್ಲ ಸದಾಕಾಲ ಅವರನ್ನು ಹಾಡಿಹೊಗಳುವ ಭಟ್ಟಂಗಿಗಳು ಅವರ ಸುತ್ತ ಇರಬೇಕು ಎಂದು ಸಂಸದ ಅಸಾದುದ್ದೀನ್ ಓವೈಸಿ ಲೇವಡಿ ಮಾಡಿದ್ದಾರೆ. ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಪ್ರಧಾನಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ನನಗಾಗಿ ದೇಶದಲ್ಲಿ 50 ರೈತರು ಸತ್ತರೆ? ಎಂದು ರೈತರ ಬಗ್ಗೆ ಬಹಳ ಹಗುರವಾಗಿ ಮಾತನಾಡಿರುವುದನ್ನು ಓವೈಸಿ ಬಲವಾಗಿ ಖಂಡಿಸಿದ್ದಾರೆ.
ಯಾವುದೇ ಸತ್ಯ ಘಟನೆಗಳನ್ನು ಜೀರ್ಣಿಸಿಕೊಳ್ಳಲು ಪ್ರಧಾನಿಯವರಿಗೆ ಆಗುವುದಿಲ್ಲ ಅವರಿಗೆ ಜಿ ಹೂಜರ್ ಎಂದು ಹಾಡಿಹೊಳುವ, ಹೊಗಳುಭಟ್ಟರು ಬೇಕು ಎಂದು ಅಸಾದುದ್ದೀನ್ ತರಾಟೆಗೆ ತೆಗೆದುಕೊಂಡಿದ್ದಾರೆ .
ನಾನು ಹೇಳುವ ಮಾತಿನ ಮೇಲೆ ನಂಬಿಕೆ ಇಲ್ಲ ಎಂಬುದೆನೋ ಸರಿ ಆದರೆ ಭಾರತ ಸರ್ಕಾರವೇ ನೇಮಕ ಮಾಡಿರುವ ರಾಜ್ಯಪಾಲರ ಮಾತನ್ನು ಪ್ರಧಾನಿ ಕೇಳುವುದಿಲ್ಲ ಮತ್ತು ಒಪ್ಪಿಕೊಳ್ಳುವುದಿಲ್ಲ ಎಂದರೆ ಇದು ಸಂವಿಧಾನಕ್ಕೆ ಮಾಡಿದ ಗುರುತರ ಅಪಚಾರವಲ್ಲವೇ, ಎಂದು ಅಸಮಾಧಾನ ಹೊರಹಾಕಿದ್ದಾರೆ.
ಪ್ರಧಾನಮಂತ್ರಿ ಅವರ ನಡೆ ಸರ್ವಾಧಿಕಾರಿ ಧೋರಣೆ ಆಗಿದೆ, ಅವರು ಹೇಳಿದ್ದನ್ನು ಮಾತ್ರ ದೇಶ ಕೇಳಬೇಕು ಬೇರೆಯವರು ಹೇಳಿದ ಮಾತನ್ನು ಕೇಳುವ ಮನಸ್ಥಿತಿ ಅವರಿಗಿಲ್ಲ ಎಂಬುದನ್ನು ಅವರ ನಡವಳಿಕೆಗಳೇ ಸಾರಿ- ಸಾರಿ ಹೇಳುತ್ತಿವೆ ಎಂದು ಓವೈಸಿ ಟೀಕಿಸಿದ್ದಾರೆ.



