Breaking NewsLatestರಾಜಕೀಯರಾಜ್ಯರಾಷ್ಟ್ರೀಯ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಮೇಲೂ ‘ಪೆಗಾಸಸ್’ ಕಣ್ಣಿಟ್ಟಿತ್ತೇ?

ಬೆಂಗಳೂರು: ‘ಪೆಗಾಸಸ್’ ಕಣ್ಣು 2019ರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಮೇಲೂ ಇತ್ತು ಎಂಬುದನ್ನು ಬಯಲು ಮಾಡುವ ಸಂಗತಿಯೊಂದನ್ನು ದಿ ವೈರ್ ಹೊರಹಾಕಿದೆ. ಪೆಗಾಸಸ್ ಪಟ್ಟಿಯಲ್ಲಿ ಈ ಸರ್ಕಾರಕ್ಕೆ ಸಂಬಂಧಿಸಿದ ದೂರವಾಣಿ ಸಂಖ್ಯೆಗಳೂ ಇವೆ ಎಂಬುದನ್ನು ಅದು ವರದಿ ಮಾಡಿದೆ.
ಆಗ ಉಪ ಮುಖ್ಯಮಂತ್ರಿಯಾಗಿದ್ದ ಜಿ ಪರಮೇಶ್ವರ್ ಮತ್ತು ಮುಖ್ಯಮಂತ್ರಿಯಾಗಿದ್ದ ಎಚ್ ಡಿ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಕಾರ್ಯದರ್ಶಿಗಳ ಫೋನ್ ಸಂಖ್ಯೆಗಳು ಪೆಗಾಸಸ್ ಕಣ್ಗಾವಲಿನಲ್ಲಿ ಇದ್ದವೆಂಬ ಅಂಶದ ಬಗ್ಗೆ ವೈರ್ ವರದಿ ಗಮನ ಸೆಳೆದಿದೆ.
2019ರಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸುವ ಮೂಲಕ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತ್ತು.
ಇಸ್ರೇಲ್ನ ಎನ್ಎಸ್ಓ ಗ್ರೂಪ್ನ ಭಾರತೀಯ ಕ್ಲೈಂಟ್ ಕುತೂಹಲ ಹೊಂದಿದ್ದ ಫೋನ್ ಸಂಖ್ಯೆಗಳ ಪಟ್ಟಿಯಲ್ಲಿ ಈ ಸಂಖ್ಯೆಗಳು ಕಂಡಿರುವುದಾಗಿ ವರದಿ ಹೇಳಿದೆ. ಫ್ರಂಚ್ ಮೀಡಿಯಾ ಬಹಿರಂಗಗೊಳಿಸಿರುವ ಲೀಕ್ ಆಗಿರುವ ಫೋನ್ ಸಂಖ್ಯೆಗಳ ಪಟ್ಟಿ ಈಗಾಗಲೇ ದೇಶದ ಜನರ ಆತಂಕಕ್ಕೆ ಕಾರಣವಾಗಿದೆ.
