
ವಾಷಿಂಗ್ಟನ್ : ಅಮೆರಿಕಾದಲ್ಲಿ ಕೋವಿಡ್ ರೂಪಾಂತರಿಯ ಒಮಿಕ್ರಾನ್ ಸೋಂಕು ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ.
ಒಂದೇ ದಿನದಲ್ಲಿ 5 ಲಕ್ಷಕ್ಕು ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿ 1700ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ಕಳೆದ ಡಿಸೆಂಬರ್ 1ರಂದು ದೇಶದಲ್ಲಿ ಮೊದಲ ಪ್ರಕರಣ ಕಾಣಿಸಕೊಂಡು ದ್ದು ನಂತರ ಹೊಸ ಸೋಂಕು ವ್ಯಾಪಕವಾಗಿ ದೇಶವನ್ನು ವ್ಯಾಪಿಸಿಕೊಳ್ಳುತ್ತಿದೆ . ಇದರ ಕಾರಣದಿಂದ ಆಸ್ಪತ್ರೆಗೆ ಸೇರುವ ರೋಗಿಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದೆ.
ಮಕ್ಕಳನ್ನು ಬಿಡದೆ ಸೋಂಕು ಅವರಿಸಿ ಕೊಳ್ಳುತ್ತಿದೆ ಇದರಿಂದ ಸಂಚಾರ ಕ್ರೀಡೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಿರ್ಬಂಧಿಸಲಾಗಿದೆ. ಕಳೆದ ಒಂದು ವಾರದ ಅವಧಿಯಲ್ಲಿ ಸುಮಾರು 16 ಲಕ್ಷ ಹೊಸ ಪ್ರಕರಣಗಳು ವರದಿಯಾಗಿದೆ.
ದೇಶದ ಬೇರೆ,ಬೇರೆ ರಾಜ್ಯಗಳಿಗೂ ಸೋಂಕು ವೇಗವಾಗಿ ಹರಡುತ್ತಿರುವುದು ಬಹಳ ಕಳವಳಕ್ಕೆ ಕಾರಣವಾಗಿದೆ.



