Latestಕಲಬುರ್ಗಿಜಿಲ್ಲಾ ಸುದ್ದಿಧರ್ಮರಾಜ್ಯಸುದ್ದಿ

ನ್ಯಾಯಸುಧಾ ಉತ್ಸವ: ವೇದ ವಿದ್ಯಾರ್ಥಿಗಳಿಗೆ ಇದು ಘಟಿಕೋತ್ಸವ!

ಕಲಬುರಗಿ: ಕಾಗಿಣಾ ನದಿ ತಟದಲ್ಲಿರುವ ಮಳಖೇಡ ಜಯತೀರ್ಥರ ಮೂಲ ಬೃಂದಾವನ ಉತ್ತರಾಧಿ ಮಠದಲ್ಲಿ ಮೂರು ದಿನಗಳ ಕಾಲ ಅದ್ಬುತವಾಗಿ ನ್ಯಾಯಸುಧಾ ಮಹೋತ್ಸವ ಜರುಗಿದ್ದು, ಶೆನಿವಾರ ಉತ್ಸವಕ್ಕೆ ತೆರೆಬಿದ್ದಿತು. ಅನೇಕ ಯತಿಗಳು ಈ ಉತ್ಸವದಲ್ಲಿ ಭಾಗಿಯಾಗಿದ್ದರು. ನಾಡಿನ ಅನೇಕ ಭಕ್ತರು ಉತ್ಸವಕ್ಕೆ ಸಾಕ್ಷಿಯಾದರು..

ಪವಿತ್ರ ಧಾರ್ಮಿಕ ಸ್ಥಳವಾದ ಮಳಖೇಡ ಉತ್ತರಾಧಿ ಮಠದಲ್ಲಿ ಮಾರ್ಚ್ 10 ರಿಂದ 12 ರವರೆಗೆ ನ್ಯಾಯಸುಧಾ ಉತ್ಸವ ನಡೆದಿದ್ದು, ಮೂರು ದಿನಗಳ ಕಾಲ ಭಕ್ತಿ ಮೇಳೈಸಿತ್ತು. ಉತ್ತರಾದಿ ಮಠಾಧೀಶರಾದ ಸತ್ಯಾತ್ಮತೀರ್ಥ ಶ್ರೀಪಾದರು ಆದಿಯಾಗಿ ಮಾಧ್ವ ಪೀಠಗಳ ಅನೇಕ ಯತಿಗಳು ಉತ್ಸವದಲ್ಲಿ ಭಾಗಿಯಾಗಿದ್ದರು. ಉತ್ತರಾದಿಮಠದ ಪೀಠಾಧಿಪತಿಗಳಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಮಹೋತ್ಸವಕ್ಕೆ ಚಾಲನೆ ನೀಡಿದ್ದು, ಮೂರು ದಿನಗಳ ಕಾಲ ಪ್ರವಚನ ನೀಡಿದ್ರು. ಬೆಂಗಳೂರಿನ ಶ್ರೀ ಜಯತೀರ್ಥ ವಿದ್ಯಾಪೀಠದ ವೇದಾಂತ ವಿದ್ಯಾರ್ಥಿಗಳು ನ್ಯಾಯಸುಧಾ ಮಂಗಳ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಉತ್ತರಾದಿ ಮಠದಲ್ಲಿ ನಡೆದ ಧಾರ್ಮಿಕ ಉತ್ಸವಕ್ಕೆ ಶನಿವಾರ ಮುಕ್ತಾಯ ಹಾಡಲಾಯಿತು. ಬೆಂಗಳೂರು ಸೇರಿ ಹಲವು ಜಿಲ್ಲೆಯ ಭಕ್ತರು ಆಗಮಿಸಿ ಮೂಲ ಬೃಂದಾವನದ ದರ್ಶನ ಪಡೆದರು. ಬಂದ ಭಕ್ತರೆಲ್ಲರೂ ಪ್ರಸಾದ ಸ್ವೀಕರಿಸಿ ಧನ್ಯರಾದ್ರು. ಇದೇವೇಳೆ ಪೂಜಾ ಸಾಮಗ್ರಿಗಳ ಮಳಿಗೆಗಳಲ್ಲೂ ಜನ ತುಂಬಿ ತುಳುಕುತ್ತಿರುವಂಥ ದೃಶ್ಯ ಕಂಡು ಬಂದಿದ್ದು ವಿಶೇಷವಾಗಿತ್ತು.

ಏನಿದು ನ್ಯಾಯಸುಧಾ ಉತ್ಸವ:

ಮಾಧ್ವ ಸಿದ್ದಾಂತದಲ್ಲಿ ಟೀಕಾರಾಯರು ರಚಿಸಿರುವ ನ್ಯಾಯಸುಧಾ ಗ್ರಂಥ ಒಂದು ಮೇರುಕೃತಿ. ವೇದಾಂತ ಅಧ್ಯಯನದಲ್ಲಿ ತೊಡಗುವವರು 14 ವರ್ಷಗಳ ಕಾಲ ಗುರುಕುಲದಲ್ಲಿ ಅದ್ಯಯನ ಮಾಡಿ ನಂತರ ಕೊನೆಯಲ್ಲಿ ಸುಧಾ ಗ್ರಂಥ ಅಭ್ಯಾಸ ಮಾಡುತ್ತಾರೆ. ಈ ಗ್ರಂಥದ ಅಧ್ಯಯನ ಆಧರಿಸಿಯೇ ವಿದ್ಯಾರ್ಥಿಗಳ ಪಾಂಡಿತ್ಯ ನಿರ್ಧಾರವಾಗುತ್ತೆ. ಹೀಗೆ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆಂದು ಘೋಷಿಸಿ ಶುಭ ಕೋರುವ ಉತ್ಸವವೇ ನ್ಯಾಯಸುಧಾ ಮಂಗಳ ಮಹೋತ್ಸವ. ಇನ್ನೊಂದು ಅರ್ಥದಲ್ಲಿ ಇದು ವೇದಾಂತ ವಿದ್ಯಾರ್ಥಿಗಳ ಪಾಲಿನ ಘಟಿಕೋತ್ಸವ.‌

Spread the love

Related Articles

Leave a Reply

Your email address will not be published. Required fields are marked *

Back to top button