Latestಜಿಲ್ಲಾ ಸುದ್ದಿಮೈಸೂರು
ಮೈಸೂರಿನ ಚಾಮುಂಡಿಬೆಟ್ಟ ಉಳಿಸುವಂತೆ ಪ್ರಧಾನಿಗೆ ಪತ್ರ ಬರೆದ ಸಾಹಿತಿ ಎಸ್ ಎಲ್ ಭೈರಪ್ಪ

ಮೈಸೂರು: ನೂತನ ಯೋಜನೆ ರೂಪಿಸಿರುವ ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಿಂದ ಚಾಮುಂಡಿಬೆಟ್ಟಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ಚಾಮುಂಡಿ ಬೆಟ್ಟ ಉಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಹಿತಿ ಎಸ್.ಎಲ್ ಭೈರಪ್ಪ ಪತ್ರ ಬರೆದಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟ ಉಳಿವಿಗೆ ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಸಾಹಿತಿ ಎಸ್ ಎಲ್ ಭೈರಪ್ಪರವರು ಕೇಂದ್ರದ ಪ್ರಸಾದ ಯೋಜನೆಯಿಂದ ಚಾಮುಂಡಿ ಬೆಟ್ಟಕ್ಕೆ ತೊಂದರೆಯಿದೆ. ಚಾಮುಂಡಿ ಬೆಟ್ಟ ಕಾಂಕ್ರಿಟ್ ಕಾಡು ಮಾಡುವ ಯೋಜನೆಯನ್ನ ಅನುಸ್ಠಾನಗೊಳಿಸಬಾರದು. ಚಾಮುಂಡಿ ಬೆಟ್ಟಕ್ಕೆ ಹೋಗುವ ವಾಹನಗಳಿಗೆ ನಿರ್ಬಂಧಿಸಬೇಕು.
ಪರಿಸರ ಸ್ನೇಹಿತ ವಿದ್ಯುತ್ ಚಾಲಿತ ವಾಹನ ಬಸ್ ಚಾಲನೆ ಬಳಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹಾಗೆಯೇ ಚಾಮುಂಡಿ ಬೆಟ್ಟದಲ್ಲಿ 4 ಸಾವಿರ ಜನ ವಾಸವಿದ್ದಾರೆ. ಅವರನ್ನ ಬೇರೆ ಜಾಗಕ್ಕೆ ಸ್ಥಳಾಂತರಿಸಬೇಕು. ಅರ್ಚಕರು, ಸಿಬ್ಬಂದಿಗಳು ಇರಲು ಅವಕಾಶ ಮಾಡಿಕೊಡಬೇಕು ಎಂದು ಪ್ರಧಾನಿ ಮೋದಿಗೆ ಸಾಹಿತಿ ಎಸ್.ಎಲ್ ಭೈರಪ್ಪ ಮನವಿ ಮಾಡಿದ್ದಾರೆ.



