ಕಲಬುರ್ಗಿಯಲ್ಲಿ ಹೊಸ ವರ್ಷಾಚರಣೆಗೆ ಸಂಭ್ರಮಕ್ಕೆ ಬ್ರೇಕ್: ರಾತ್ರಿ 10ರ ನಂತರ ಹೊರಬಾರದಂತೆ ಕಮಿಷನರ್ ಎಚ್ಚರಿಕೆ

ಕಲಬುರಗಿ: ಒಮಿಕ್ರಾನ್ ಆತಂಕದ ಹಿನ್ನಲೆ ಹೊಸ ವರ್ಷಾಚರಣೆಗೆ ಸರ್ಕಾರ ಬ್ರೇಕ್ ಹಾಕಿದೆ. ಅಲ್ಲದೆ ರಾತ್ರಿ 10 ಗಂಟೆಯಿಂದ ನೈಟ್ ಕರ್ಫ್ಯೂ ಹಿನ್ನೆಲೆ ಬಂದೋಬಸ್ತ್ ಗೆ ಕಲಬುರಗಿ ಪೊಲೀಸರು ಸಜ್ಜಾಗಿದ್ದಾರೆ. ನಗರದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ರಾತ್ರಿ ಹತ್ತು ಗಂಟೆ ನಂತರ ಸುಖಾಸುಮ್ಮನೆ ಹೊರಗಡೆ ಓಡಾಡಿದ್ರೆ ಕಾನೂನು ಕ್ರಮ ಜರುಗಿಸುವುದಾಗಿ ಪೋಷಕ ಕಮಿಷನರ್ ವೈ ಎಸ್ ರವಿಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
10 ಗಂಟೆಗೆ ಹೋಟೆಲ್, ಬಾರ್ ಮತ್ತು ರೆಸ್ಟೊರೆಂಟ್ ಬಂದ್ ಮಾಡುವಂತೆ ವರ್ತಕರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಹತ್ತು ಗಂಟೆ ನಂತರ ತುರ್ತು ಸಂದರ್ಭದಲ್ಲಿ ಇಲ್ಲದೆ ರಸ್ತೆಯಲ್ಲಿ ಓಡಾಡಿದ್ರೆ ವಾಹನಗಳನ್ನು ಸೀಜ್ ಮಾಡುವುದರ ಜೊತೆಗೆ ಎಫ್ ಐ ಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು. ಸಂಜೆ 7 ಗಂಟೆಯ ನಂತರ ಬಂದೋಬಸ್ತ್ ಗಾಗಿ ಪೊಲೀಸರು ಫೀಲ್ಡ್ ಗೆ ಇಳಿಯಲಿದ್ದಾರೆ ಎಂದು ತಿಳಿಸಿದ್ದಾರೆ.
ಗ್ರಾಹಕರನ್ನು ಸೆಳೆಯುತ್ತಿವೆ ವೆರೈಟಿ ಕೇಕ್ :
ಗ್ರಾಹಕರನ್ನು ಆಕರ್ಷಿಸಲು ವೆರೈಟಿ ವೆರೈಟಿ ಕೇಕ್ ರೆಡಿ ಮಾಡಿಕೊಂಡು ಬೇಕರಿ ಮಾಲಿಕರು, ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ. ಪೈನಾಪಲ್, ಚಾಕ್ಲೇಟ್, ಸ್ಟಾಬೇರಿ, ವೆನಿಲ್ಲಾ, ಐಸ್ ಕೇಕ್ ಸೇರಿದಂತೆ ವಿವಿಧ ಬಗೆಯ ಕೇಕ್ ಗಳು ತಯಾರಿಸಲಾಗಿದೆ. ಸರಕಾರದ ಆದೇಶದಿಂದ ವ್ಯಾಪಾರದ ಮೇಲೆ ಪರಿಣಾಮ ಬೀಳುತ್ತಿದೆ.

ಕಳೆದ ಎರಡು ವರ್ಷಗಳಿಂದ ಕೊವೀಡ್ ಹಿನ್ನೆಲೆ ಲಾಕ್ಡೌನ್ ಜಾರಿ ಮಾಡಿದ್ದರಿಂದ ವ್ಯಾಪಾರಕ್ಕೆ ತುಂಬಾ ಸಮಸ್ಯೆ ಉಂಟಾಗಿತ್ತು. ಈ ವರ್ಷವೂ ಸಹ ನೈಟ್ ಕರ್ಫ್ಯು ಜಾರಿ ಮಾಡಿದ್ದರಿಂದ ವ್ಯಾಪಾರ ಕಡಿಮೆಯಾಗುವ ಸಾಧ್ಯತೆ ಇದೆ. ಹೀಗಾಗಿ ಪ್ರತಿ ವರ್ಷಕ್ಕಿಂತ ಈ ವರ್ಷ ಕಡಿಮೆ ಕೆಕ್ ತಯಾರಿಸಿದ್ದವೆ.
ಇನ್ನೂ ಒಂದೆರಡು ಗಂಟೆ ಹೆಚ್ಚಿಗೆ ಸಮಯ ನೀಡಿದಿದ್ರೆ ತುಂಬಾ ಅನುಕೂಲವಾಗುತ್ತಿತ್ತು ಎಂದು ಬೇಕರಿ ಮಾಲೀಕ ಭರತ ಅಸಮಾಧಾನವನ್ನು ಹೊರಹಾಕಿದ್ದಾರೆ.



