Latestರಾಜಕೀಯರಾಷ್ಟ್ರೀಯಸುದ್ದಿ

ಬಿಜೆಪಿ ನಾಯಕರಿಗೆ ಕಾಂಗ್ರೆಸ್ ವಿರುದ್ಧ ಟೀಕಿಸಲು ಹೊಸ ಅಸ್ತ್ರ

ನವದೆಹಲಿ: ಬಿಜೆಪಿ ನಾಯಕರಿಗೆ ಕಾಂಗ್ರೆಸ್ ವಿರುದ್ಧ ಟೀಕೆ ಮಾಡಲು ಹೊಸ ಅಸ್ತ್ರ ಸಿಕ್ಕಿದೆ. ಅದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಕುರಿತ ವಿಡಿಯೋಯಾಗಿದೆ.

ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ರಾಹುಲ್ ಗಾಂಧಿ ನೈಟ್ ಕ್ಲಬ್ ನಲ್ಲಿ ಸಂತೋಷ ಕೂಟದಲ್ಲಿ ಭಾಗಿಯಾಗಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಹರಿದಾಡುತ್ತಿದೆ. ವೈರಲ್ ಆಗಿರುವ ವಿಡಿಯೋದ ಹಿನ್ನೆಲೆಯಲ್ಲಿ ಡಿಸ್ಕೊಥೆಕ್ ಕಾಣಿಸಿಕೊಂಡಿದ್ದು, ರಾಹುಲ್ ಗಾಂಧಿಯ ಸುತ್ತಮುತ್ತ ಇರುವವರು ಮಧ್ಯ ಸೇವಿಸುತ್ತಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕುರಿತು ತೀವ್ರ ಬಿಕ್ಕಟ್ಟು, ಭಿನ್ನಾಭಿಪ್ರಾಯ ಎದುರಾಗಿರುವ ಹೊತ್ತಿನಲ್ಲಿ ಈ ವಿಡಿಯೋ ಹೊರಬಂದಿದೆ. ಕಠ್ಮಂಡುವಿನಲ್ಲಿ ಸ್ನೇಹಿತನೊಬ್ಬನ ಮದುವೆಯಲ್ಲಿ ರಾಹುಲ್ ಗಾಂಧಿ ನಿನ್ನೆ ಸೋಮವಾರ ಭಾಗವಹಿಸಿದ್ದರು ಎಂದು ಹೇಳಲಾಗುತ್ತಿದೆ. ಅಲ್ಲಿ ಮದುವೆ ನಂತರ ಆಯೋಜಿಸಲಾಗಿದ್ದ ಪಾರ್ಟಿಯಲ್ಲಿ ರಾಹುಲ್ ಗಾಂಧಿ ಭಾಗಿಯಾಗಿದ್ದಾರೆ.

ನೇಪಾಳ ರಾಜಧಾನಿ ಕಠ್ಮಂಡುವಿಗೆ ನಿನ್ನೆ ಅಪರಾಹ್ನ ಬಂದಿಳಿದ ರಾಹುಲ್ ಗಾಂಧಿ ನಂತರ ರಾತ್ರಿ ಮದುವೆ ಔತಣಕೂಟ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ತಮ್ಮ ಮಗಳ ಮದುವೆ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿಯವರಿಗೆ ಆಹ್ವಾನ ನೀಡಿದ್ದೆ ಎಂದು ಮ್ಯಾನ್ಮಾರ್ ಗೆ ನೇಪಾಳದ ಮಾಜಿ ರಾಯಭಾರಿ ಬೀಮ್ ಉದಾಸ್ ಹೇಳಿರುವುದಾಗಿ ಕಠ್ಮಂಡು ಪೋಸ್ಟ್ ವರದಿ ಮಾಡಿದೆ.

Spread the love

Related Articles

Leave a Reply

Your email address will not be published. Required fields are marked *

Back to top button