Breaking NewsLatestಜಿಲ್ಲಾ ಸುದ್ದಿಮನರಂಜನೆಮೈಸೂರುಸಿನಿಮಾಸೆಲೆಬ್ರಿಟಿಸ್ಯಾಂಡಲ್ ವುಡ್
ದಿ ಕಾಶ್ಮೀರ ಫೈಲ್ಸ್ ರಕ್ತ ಸಿಕ್ತ ಚರಿತ್ರೆ, ನೋಡುವವರು ನೋಡುತ್ತಾರೆ: ಹೆಚ್.ವಿಶ್ವನಾಥ್

ಮೈಸೂರು: ರಾಜ್ಯದ ಚಿತ್ರಮಂದಿರಗಳಿಂದ ಪುನೀತ್ ರಾಜ್‌ಕುಮಾರ್ ನಟನೆಯ ಜೇಮ್ಸ್ ಚಿತ್ರ ತೆರವು ಮಾಡಿ ಸಾಂಸ್ಕೃತಿಕ ರಾಯಭಾರಿಯಾದ ಕುಟುಂಬಕ್ಕೆ ಅವಮಾನ ಮಾಡಬಾರದು ಎಂದು ಎಂಎಲ್ ಸಿ ಹೆಚ್,ವಿಶ್ವನಾಥ್ ಮನವಿ ಮಾಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು ಡಾ.ರಾಜ್‌ಕುಮಾರ್ ಕುಟುಂಬ ರಾಜ್ಯದಲ್ಲಿ ಸಾಂಸ್ಕೃತಿಕ ರಾಯಭಾರಿಯಂತೆ ಇದೆ. ಅವರ ಕುಡಿ ಡಾ.ಪುನೀತ್ ರಾಜ್‌ಕುಮಾರ್ ನಿಧನದ ನಂತರ ಜೇಮ್ಸ್ ಬಿಡುಗಡೆ ಆಗಿದೆ. ಇಡೀ ಕುಟುಂಬ ರಾಜ್ಯದ ಜನರ ಜೊತೆ ಬೆಸೆದುಕೊಂಡಿದೆ. ಈ ಸಂದರ್ಭದಲ್ಲಿ ಜೇಮ್ಸ್ ಎತ್ತಂಗಡಿ ಆಗಬಾರದು. ಜೇಮ್ಸ್ ಚಿತ್ರಮಂದಿರಗಳಿಂದ ಎತ್ತಂಗಡಿ ಆದರೆ ರಾಜ್ಯದ ಜನ ರೊಚ್ಚಿಗೆಳುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಕನ್ನಡ ಸಿನಿಮಾಗಳಿಗೆ ಮೊದಲ ಆದ್ಯತೆ ನೀಡಬೇಕು. ಹಿಂದಿಯ ದಿ ಕಾಶ್ಮೀರ ಫೈಲ್ಸ್ ಸಿನಿಮಾವೇ ಬೇರೆ. ಅದೊಂದು ರಕ್ತಸಿಕ್ತ ಚರಿತ್ರೆ. ಅದನ್ನು ನೋಡಬೇಕಾದವರು ಅದನ್ನು ನೋಡುತ್ತಾರೆ. ಮೊದಲು ನಮ್ಮ ಸಿನಿಮಾಗಳಿಗೆ ಆದ್ಯತೆ ಕೊಡಬೇಕು ಎಂದರು.
