Latestಜಿಲ್ಲಾ ಸುದ್ದಿ

Mysore Ambavilasa palace: ಇಂದಿನಿಂದ ಮೈಸೂರು ಅರಮನೆ ಪ್ರವೇಶ ಟಿಕೆಟ್ ದರ ಏರಿಕೆ

ಮೈಸೂರು : ಇಂದಿನಿಂದಲೇ ಮೈಸೂರು ಅರಮನೆ ಪ್ರವೇಶ ಟಿಕೆಟ್ ದರವನ್ನ ಏರಿಕೆ ಮಾಡಿದೆ. ಅರಮನೆ ಆಡಳಿತ ಮಂಡಳಿ ಟಿಕೆಟ್ ದರ ಹೆಚ್ಚಿಸಿದ್ದು, ಇನ್ನೂ ಅರಮನೆ ಪ್ರವೇಶ ದುಬಾರಿಯಾಗಲಿದೆ.

ಅಗತ್ಯ ವಸ್ತುಗಳ  ದರ ಏರಿಕೆ ಬೆನ್ನಲ್ಲೆ  ಅರಮನೆ ಪ್ರವೇಶ ಟಿಕೆಟ್ ದರವನ್ನ ಅರಮನೆ ಮಂಡಳಿ ಹೆಚ್ಚಳ ಮಾಡಿದೆ. ಅರಮನೆ ಪ್ರವೇಶ ದರ 70 ರೂ. ನಿಂದ 100 ರೂ.ಗೆ ಏರಿಕೆಯಾಗಿದೆ. ಪೋಷಕರ ಜೊತೆ ಆಗಮಿಸುವ ಮಕ್ಕಳಿಗೆ ಹಳೆಯ ದರ 30 ರೂ. ಇತ್ತು ಈಗ ಮಕ್ಕಳಿಗೆ ಹೊಸ ದರ 50 ರೂ ಮಾಡಲಾಗಿದೆ.

ಶಾಲಾ ಮಕ್ಕಳಿಗೆ ಹಳೆಯ ದರ 20 ರೂ ಹೊಸ ದರ 50 ರೂ ಆಗಿದೆ. ಕನ್ನಡದ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಯಾವುದೇ ಏರಿಕೆ ಇಲ್ಲ. ಇಂಗ್ಲಿಷ್ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ದರ 120 ರೂಗೆ ನಿಗದಿ ಮಾಡಲಾಗಿದೆ. ಕೊರೊನಾ ಲಾಕ್ ಡೌನ್ ನಿಂದ ಅರಮನೆ ಮಂಡಳಿಯ ಆದಾಯ ಕುಸಿತ ಕಂಡಿತ್ತು ಆದ್ದರಿಂದ ಈಗ ಟಿಕೆಟ್ ದರ ಹೆಚ್ಚಿಸಿದೆ.

Spread the love

Related Articles

Leave a Reply

Your email address will not be published. Required fields are marked *

Back to top button