Latestಕಲಬುರ್ಗಿಜಿಲ್ಲಾ ಸುದ್ದಿ

ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ವೇಳೆ ತಾಯಿ ಮಗು ಸಾವು: ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕುಟುಂಬಸ್ಥರ ಆಕ್ರೋಶ

ಕಲಬುರಗಿ: ಜಿಲ್ಲಾಸ್ಪತ್ರೆಯಲ್ಲಿ ಮತ್ತೆ ವೈದ್ಯರ ನಿರ್ಲಕ್ಷ್ಯ ಆರೋಪ ಕೇಳಿ ಬಂದಿದೆ. ವೈದ್ಯರ ನಿರ್ಲಕ್ಷದಿಂದಾಗಿ ಹೆರಿಗೆ ವೇಳೆ ನವಜಾತ ಶಿಶು ಸಾವನ್ನಪ್ಪಿದ್ದು, ಅರ್ಧ ಗಂಟೆಯಲ್ಲಿ ತಾಯಿ ಕೂಡಾ ಮೃತಪಟ್ಟಿದ್ದಾಳೆ ಅಂತ ಕುಟುಂಬಸ್ಥರು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲಬುರಗಿ ತಾಲೂಕಿನ ನಡುವಿನಗಳ್ಳಿ ಗ್ರಾಮದ ನಿವಾಸಿ ಕನ್ಯಾಕುಮಾರಿ (23) ಹಾಗೂ ಈಕೆಯ ನವಜಾತ ಶಿಶು ಮೃತ ದುರ್ವೈವಿಗಳು. ಕಳೆದ ರಾತ್ರಿ ಕನ್ಯಾಕುಮಾರಿಗೆ ಹೆರಿಗೆ ನೋವು ಪ್ರಾರಂಭವಾಗಿತ್ತು. ಕುಟುಂಬದವರು ರಾತ್ರಿ 9 ಗಂಟೆಗೆ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.

ನಂತರ ರಾತ್ರಿ ಒಂದು ಗಂಟೆ ಸಮಯದಲ್ಲಿ ಹೆರಿಗೆ ಮಾಡಿಸಲಾಗಿದ್ದು, ಹೆರಿಗೆ ಸಮಯದಲ್ಲೇ ಕೂಸು ಮೃತಪಟ್ಟಿದೆ. ಹೆರಿಗೆ ನಂತರ ಹೊಟ್ಟೆ ನೋವು ಎಂದಿದಕ್ಕೆ ಕನ್ಯಾಕುಮಾರಿಗೆ ನರ್ಸ್ ಗಳು ಮಾತ್ರೆ ನೀಡಿದ್ದರಂತೆ, ಮಾತ್ರೆ ಸೇವಿಸಿದ್ದ ಕೆಲವೇ ನಿಮಿಷಗಳಲ್ಲಿ ತಾಯಿಯೂ ಸಾವನ್ನಪ್ಪಿದ್ದಾಳೆ.

ತಾಯಿ ಮಗು ಸಾವಿಗೆ ಆಸ್ಪತ್ರೆ ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಕಾರಣ ಅಂತಿರೋ ಕುಟುಂಬಸ್ಥರು ಆಸ್ಪತ್ರೆ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ನಿರ್ಲಕ್ಷ ತೋರಿದ ಆರೋಗ್ಯ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಆಸ್ಪತ್ರೆಯ ಎದುರಿಗೆ ಪ್ರತಿಭಟನೆ ನಡೆಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button