Latestಕೊಡಗುಜಿಲ್ಲಾ ಸುದ್ದಿ
ಹೋಂ ಸ್ಟೇಯಲ್ಲಿ ಮಾಡೆಲ್ ನಿಗೂಢ ಸಾವು : ಮರಣೋತ್ತರ ಪರೀಕ್ಷೆಯಲ್ಲಿ ಕಾರಣ ಬಯಲು

ಮಡಿಕೇರಿ: ಕೊಡಗಿಗೆ ಪ್ರವಾಸಕ್ಕೆಂದು ಬಂದಿದ್ದ 23 ವರ್ಷದ ಬಳ್ಳಾರಿ ಜಿಲ್ಲೆಯ ತೋರಣಗಲ್ ನಿವಾಸಿ ಮಾಡೆಲ್ ವಿಘ್ನೇಶ್ವರಿ ಮಡಿಕೇರಿ ನಗರದ ಡೈರಿ ಫಾರ್ಮ್ ಬಳಿಯ ಕೂರ್ಗ್ ವಿಲೇಜ್ ಹೋಂ ಸ್ಟೇಯಲ್ಲಿ ಮೃತಪಟ್ಟಿದ್ದರು.
ಹೋಂ ಸ್ಟೇಯಲ್ಲಿ ಮಾಡೆಲ್ ವಿಘ್ನೇಶ್ವರಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆ ವರದಿ ಬಹಿರಂಗವಾಗಿದ್ದು, ಸಾವಿಗೆ ಕಾರಣ ತಿಳಿದುಬಂದಿದೆ. ವಿಷಾನಿಲ ಸೇವನೆಯಿಂದಲೇ ಮಾಡೆಲ್ ವಿಘ್ನೇಶ್ವರಿ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ.
ಕಾರ್ಬನ್ ಮಾನಾಕ್ಸೈಡ್ ನಿಂದ ಯುವತಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ವಿಘ್ನೇಶ್ವರಿ ಮಾಡೆಲಿಂಗ್ ಕ್ಷೇತ್ರದಲ್ಲಿ ಖ್ಯಾತಿ ಪಡೆದಿದ್ದರು.



