Breaking NewsLatestಉಡುಪಿಜಿಲ್ಲಾ ಸುದ್ದಿ
ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆಲುವು: ಇಂಧನ ಸಚಿವ ಸುನಿಲ್ ಕುಮಾರ್ ಮಸ್ತ್ ಡ್ಯಾನ್ಸ್!

ಕಾರ್ಕಳ: ನಾಲ್ಕು ರಾಜ್ಯಗಳಲ್ಲಿ ಅಭೂತಪೂರ್ವ ಬಿಜೆಪಿಯ ಗೆಲುವಿನ ಹಿನ್ನೆಲೆಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಉತ್ತರಪ್ರದೇಶದಲ್ಲಿ ಯೋಗಿ ಸರಕಾರಕ್ಕೆ ಬಹುಮತ ಬಂದ ಹಿನ್ನೆಲೆ ಕಾರ್ಯಕರ್ತರೊಂದಿಗೆ ಇಂಧನ ಸಚಿವರು ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಉತ್ತರಾಖಾಂಡ್, ಮಣಿಪುರ, ಗೋವಾ ಗೆಲುವಿನಿಂದ ಸಚಿವ ಸುನಿಲ್ ಕುಮಾರ್ ಸಂಭ್ರಮಿಸಿದ್ದಾರೆ.
ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನಲ್ಲಿ ಇಂಧನ ಸಚಿವರ ನೃತ್ಯ ಮಾಡಿ ಕಾರ್ಯಕರ್ತರನ್ನ ರಂಜಿಸಿದ್ದಾರೆ. ಅಲ್ಲದೆ ಕಾರ್ಯಕರ್ತರ ಕೈ ಕೈ ಹಿಡಿದು ಡ್ಯಾನ್ಸ್ ಮಾಡಿರುವ ಸುನೀಲ್ ಕುಮಾರ್ ಕಾರ್ಕಳದಲ್ಲಿ ಆಯೋಜಿಸಿದ್ದ ಉತ್ಸವವೊಂದಕ್ಕೆ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಉತ್ಸವದ ಆಯೋಜಕೊರೊಂದಿಗೆ ಸ್ಟೆಪ್ಸ್ ಹಾಕಿದ್ದಾರೆ. ಕಾರ್ಯಕ್ರಮಕ್ಕೆಂದು ಹಾಕಿದ್ದ ವೇದಿಕೆ ಮುಂಭಾಗ ಸಖತ್ ಡ್ಯಾನ್ಸ್ ಮಾಡಿರೋ ವಿಡಿಯೋ ಇದೀಗ ವೈರಲ್ ಆಗಿದೆ.
