Latestಜಿಲ್ಲಾ ಸುದ್ದಿಬೆಳಗಾವಿ

ನಾನು ಈಗ ಸಚಿವ ರಸ್ತೆಗಿಳಿದು ಪ್ರತಿಭಟನೆ ಮಾಡೋಕೆ ಆಗಲ್ಲ: ಸಚಿವ ಮುರುಗೇಶ್ ನಿರಾಣಿ

ಬೆಳಗಾವಿ: ಪಂಚಮಸಾಲಿ ಮೀಸಲಾತಿ ಕುರಿತು ನಡೆಯುತ್ತಿರುವ ಹೋರಾಟದ ಕುರಿತು ಮಾತನಾಡಿದ ಸಚಿವ ಮುರುಗೇಶ್ ನಿರಾಣಿ ಎಲ್ಲರಂತೆ ತಾನು ರಸ್ತೆಗಿಳಿದು ಪ್ರತಿಭಟನೆ ಮಾಡೋಕೆ ಅಗಲ್ಲಾ ನನ್ನದೇ ಆದ ಜವಾಬ್ದಾರಿಗಳು ಇವೆ. ಅಲ್ಲದೆ ಯಾರು ಕುಂಬಳ ಕಾಯಿ ಕಳ್ಳ ಎಂದರೆ ನಾವ್ಯಾಕೆ ಹೆಗಲು ಮುಟ್ಟಿಕೊಂಡು ನೋಡಿಕೊಳ್ಳಬೇಕು ಎಂದು ಹೇಳಿಕೆ ನೀಡಿದ್ದಾರೆ

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಯಮೃತ್ಯುಂಜಯ ಸ್ವಾಮೀಜಿ ನಮ್ಮ ಗುರುಗಳು, ನಮ್ಮ ಸಮಾಜದ ಪೀಠಕ್ಕೆ ಅವರನ್ನು ನಾವೇ ತಂದವರು, ಅವರು ಯಾರ ಬಗ್ಗೆ ಹೇಳಿದ್ದಾರೋ ಗೊತ್ತಿಲ್ಲ, ಕುಂಬಳ ಕಾಯಿ ಕಳ್ಳ ಎಂದರೆ ನಾನ್ಯಾಕೆ ಹೇಗಲು ಮುಟ್ಟಿಕೊಂಡು ನೋಡಲಿ ಎಂದು ಎಂದರು.

ಕಳೆದ ಹತ್ತು ವರ್ಷಗಳಿಂದ ನಾನು ಸಮಾಜಕ್ಕಾಗಿ ಹೋರಾಡಿದ್ದೇನೆ, ನಾನು ಸಚಿವನಾಗಿರುವುದರಿಂದ ಉಳಿದವರು ಮಾಡುವ ಹಾಗೆ ರೋಡಿನಲ್ಲಿ ಬಂದು ಹೋರಾಟ ಮಾಡಲು ಆಗುವುದಿಲ್ಲ,ನಾವು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂಬ ಹೋರಾಟದಲ್ಲಿ ನಾನಿದದ್ದೆ. ಕಲ್ಲು ಎಸೆಯುವುದು, ತತ್ತಿ ಒಗೆಯುವುದು ನಮ್ಮ ಸಂಪ್ರದಾಯವಲ್ಲ,ನನ್ನದೂ ಸಮೂಹ ಸಂಸ್ಥೆಯಿಂದ ಸಾಕಷ್ಟು ಜನರಿಗೆ ಉದ್ಯೋಗ ಕೊಟ್ಟಿದ್ದೇವೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರಗೆ ಪ್ರತ್ಯುತ್ತರ ನೀಡಿದ್ದಾರೆ

ಸಚಿವ ಇಲ್ಲದಿದ್ದಾಗಲೂ ನಾನು ಹೋರಾಟ ಮಾಡಿದ್ದೇನೆ. ನಾನು ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಸಿಗಬೇಕು, ವೀರಶೈವ ಲಿಂಗಾಯತ ಪಂಗಡದವರಿಗೆ ಸರಕಾರದ ಮೀಸಲಾತಿ ಸಿಗಬೇಕು. ಇದನ್ನು ನಾವು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇವೆ. ನಾನು ದೇವರಾಣೆಗೂ ಸಣ್ಣ ಮನಸ್ಸಿನ ವ್ಯಕ್ತಿ ನಾನಲ್ಲ, ಜಯಮೃತ್ಯುಂಜಯ ಸ್ವಾಮೀಜಿ ನನ್ನ ಮೇಲೆ ಆರೋಪ ಮಾಡಿರಲು ಸಾಧ್ಯವಿಲ್ಲ. ಅವರ ಹೋರಾಟ ಮಾಡುತ್ತಿದ್ದಾರೆ ಅದಕ್ಕೆ ನಮ್ಮ ಬೆಂಬಲ ಇದೆ ಎಂದು ಸ್ಪಷ್ಟಪಡಿಸಿದ್ದಾರೆ

ಇನ್ನು ಸದ್ಯದಲ್ಲೇ ಜಾಗತಿಕ ಮಟ್ಟದ ಟೆಕ್ ಪಾರ್ಕ್ ಹಾಗೂ ಉದ್ಯಮಿಗಳನ್ನು ಸೆಳೆಯಲು ಯೋಚಿಸಲಾಗುತ್ತಿದ್ದು , ಉದ್ಯೋಗ ಸೃಷ್ಟಿ, ಉದ್ಯಮ ಬೆಳವಣಿಗೆ , ಹಾಗೂ ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು

Spread the love

Related Articles

Leave a Reply

Your email address will not be published. Required fields are marked *

Back to top button