ಹೇಗಾದರೂ ಮಾಡಿ ಉಳಿಸಪ್ಪಾ ಅಂತಾ ಜಿಟಿಡಿ ಜೊತೆ ಸಿದ್ದರಾಮಯ್ಯ ಕೈಜೋಡಿಸಿದ್ದಾರೆ: ಸಚಿವ ಈಶ್ವರಪ್ಪ

ಮೈಸೂರು: ಸಿದ್ದರಾಮಯ್ಯ ನನ್ನ ಸೋಲಿಸಲು ಎಲ್ಲರೂ ಜಿಟಿ ದೇವೇಗೌಡರಿಗೆ ಬೆಂಬಲ ನೀಡಿದರು. ಹೀಗಾಗಿ ಸಿದ್ಧರಾಮಯ್ಯ ಸೋತರು. ಸಿದ್ದರಾಮಯ್ಯ ಜೊತೆ ಕೈ ಜೋಡಿಸಿ ನೀವು ಒಬ್ಬ ಅವಕಾಶವಾದಿ ರಾಜಕಾರಣಿ ಆಗಬೇಡಿ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಪ್ರಮುಖರ ಸಭೆ ಬಳಿಕ ಮಾತನಾಡಿದ ಈಶ್ವರಪ್ಪರವರು ಸಿದ್ದರಾಮಯ್ಯ ತನಗೆ ಗತಿ ಇಲ್ಲ, ಜಿಟಿ ದೇವೇಗೌಡರ ಬಳಿ ಬಂದಿದ್ದಾರೆ. ಹೇಗಾದರೂ ಮಾಡಿ ನನ್ನನ್ನ ಉಳಿಸಪ್ಪ ಅಂತ. ಬಾದಾಮಿಯಲ್ಲಿ ಈ ಸಲ ಸೋಲಿಸುತ್ತಾರೆ. ಹಾಗಾಗಿ ರಾಜಕೀಯ ಸ್ಥಿರತೆ ಉಳಿಸಿಕೊಳ್ಳಲು ಜಿಟಿ ದೇವೇಗೌಡರ ಜೊತೆ ಸ್ನೇಹ ಬೆಳೆಸಿದ್ದಾರೆ ಎಂದರು.
ನಾವು ರಾಹುಲ್ ಗಾಂಧಿಯನ್ನೇ ಸೋಲಿಸಿದ್ದೀವಿ, ಇನ್ನ ಜಿಟಿಡಿ ಸಿದ್ದು ಒಂದಾದ್ರೆ ಭಯ ಯಾಕೆ.? ಎಂದರಯ. ನೇಕಾರರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಚರಕ ತಿರುವಿ ಸೀರೆ ಖರೀದಿಸಿದರು. 70 ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ದಲಿತರು, ಹಿಂದುಳಿದವರನ್ನು ಕಡೆಗಣಿಸಿದೆ. ಪರಿಣಾಮ ದೇಶದ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಅಸ್ತಿತ್ವ ಕಳೆದುಕೊಂಡಿದೆ. ಇತ್ತೀಚೆಗೆ ತ್ರಿಪುರ ರಾಜ್ಯದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಶೂನ್ಯ ಸಂಪಾದನೆ ಮಾಡಿದೆ ಎಂದು ತಿಳಿಸಿದರು.
ಬಿಜೆಪಿ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದೆ. ಕಾಂಗ್ರೆಸ್ ದುರಾಡಳಿತದಿಂದ ಬೇಸತ್ತಿರುವ ದಲಿತರು, ಹಿಂದುಳಿದವರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಇದೇ ರೀತಿ ಮುಂದುವರಿದರೆ ಕಾಂಗ್ರೆಸ್ ಗೆ ಪ್ರಾದೇಶಿಕ ಪಕ್ಷದ ಮಾನ್ಯತೆ ಪಡೆದುಕೊಳ್ಳಲು ಸಹ ಸಾಧ್ಯವಾಗುವುದಿಲ್ಲ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.



