Breaking NewsLatestಜಿಲ್ಲಾ ಸುದ್ದಿಮೆಟ್ರೋರಾಮನಗರ

ನಾಡಿನ ಹಿತಕಾಯಲು ಬಿಜೆಪಿ ಸರ್ಕಾರ ಬದ್ದವಾಗಿದೆ: ಸಚಿವ ಅಶ್ವತ್ಥನಾರಾಯಣ

ರಾಮನಗರ: ಬಿಜೆಪಿ ನಾಡಿನ ನೆಲ ವಿಚಾರದಲ್ಲಿ ಸ್ಪಷ್ಟತೆಯಿಂದ ಕೂಡಿದೆ. ನಾಡಿನ ಹಿತಕಾಯಲು ಬಿಜೆಪಿ ಮತ್ತು ರಾಜ್ಯ ಸರ್ಕಾರ ಬದ್ದವಾಗಿದೆ ಎಂದು ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಜಾನಪದ ಲೋಕದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮಗೆ ಸಮಾಜ ಮುಖ್ಯ ಎನ್ನುವ ನೆಲಗಟ್ಟಿನ ಮೇಲೆ ಕೆಲಸ ಮಾಡುತ್ತಿದ್ದೇವೆ. ನಾವು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತೇವೆ ಎನ್ನುವವರು ನಾವಲ್ಲ ಎಂದು ಕಾಂಗ್ರೆಸ್ ಪಾದಯಾತ್ರೆಗೆ ತಿರುಗೇಟು ನೀಡಿದರು.

2008 ರಿಂದ ಕಾವೇರಿ ಪಾತ್ರದಲ್ಲಿ ಎಲ್ಲ ರೀತಿಯ ನೀರಾವರಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಅಂದು ಬಸರಾಜ ಬೊಮ್ಮಾಯಿ ಅವರೇ ನಮ್ಮ ಪಕ್ಷದ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದರು. ಚನ್ನಪಟ್ಟಣದಲ್ಲಿ ಇಗ್ಗಲೂರು ಡ್ಯಾಂನಿಂದ ಲಿಫ್ಟ್ ಇರಿಗೇಷನ್ ಮಾಡಿ ತೋರಿಸಿದ್ದು ಬಿಜೆಪಿ. ಮೇಕೆದಾಟು ಸಂಬಂಧ ಹಸಿರು ನ್ಯಾಯಾಪೀಠದಿಂದ ಅನುಮತಿಯನ್ನು ಪಡೆಯಲಾಗಿದೆ. ಮುಳುಗಡೆಯಾಗಲಿರುವ 5 ಸಾವಿರ ಹೆಕ್ಟೆರ್ ಪ್ರತಿಯಾಗಿ 7.5 ಸಾವಿರ ಹೆಕ್ಟೇರ್ ಪ್ರದೇಶವನ್ನು ನೀಡಲು ಭೂಮಿ ಗುರುತಿಸಲಾಗಿದೆ ಎಂದು ವಿವರಿಸಿದರು.

ಕಾವೇರಿ ನೀರಾವರಿ ನಿಯಮ, ಪರಿಸರ ಇಲಾಖೆ, ಸುಪ್ರೀಂ ಕೋರ್ಟ್ ನಿಂದ ಅನುಮತಿ ಪಡೆಯುವ ಕೆಲಸವಷ್ಟೆ ಬಾಕಿ ಇದೆ. ತಮಿಳು ನಾಡು ಸರಕಾರ ಸುಪ್ರಿಂ ಕೋರ್ಟ್ ಮೊರೆ ಹೋಗಿದೆ. ಹಿಂದಿನ ಸಿಎಂ ಮುಖ್ಯಮಂತ್ರಿ ಯಡಿಯೂರಪ್ಪ ಸಹ ಮೇಕೆದಾಟು ಯೋಜನೆ ಜಾರಿಗೆ ಹಲವು ಭಾರಿ ಘೋಷಿಸಿದ್ದರು. ಕೇಂದ್ರ ಜಲಸಂಪನ್ಮೂಲ‌ ಸಚಿವರೊಂದಿಗೆ ಮುಖ್ಯಮಂತ್ರಿಗಳು ಸಹ ಮಾತನಾಡಿದ್ದಾರೆ. 1997 ರಿಂದಲ್ಲೂ ಮೇಕೆದಾಟು ಯೋಜನೆಗೆ ಜಾರಿಗೆ ಪ್ರಯತ್ನಿಸಲಾಗುತ್ತಿದೆ ಎಂದರು.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ವೇಳೆ ಡಿಪಿಆರ್ ಅನ್ನು ತಯಾರಿಲ್ಲ. 2013 ರಲ್ಲೇ ಕಾಂಗ್ರೆಸ್ ಡಿಪಿಆರ್ ಸಿದ್ದ ಪಡಿಸಿದ್ದರೇ ಈ ಸಮಸ್ಯೆಗಳೇ ಬರುತ್ತಿಲ್ಲ. ಗೆಜೆಟ್ ಮಾಡಲು ಆರು ವರ್ಷ ಸಮಯ ಪಡೆದಿದ್ದಾರೆ. ಕಾವೇರಿ ನೀರವಾರಿ ನಿಗಮವಾದ ಬಳಿಕ ಈ ಆಟಗಳೆಲ್ಲ ನಡೆಯುತ್ತಿದೆ. ಅವರ ಕ್ಷೇತ್ರದಲ್ಲೇ 2016 ರಿಂದ ಏಳು ಲಿಫ್ಟ್ ಇರಿಗೇಷನ್ ನಡೆಯುತ್ತಿದೆ. ಆದರೆ, ಈ ವರೆಗು ಕಾಮಗಾರಿ ಪೂರ್ಣಗೊಳಿಸಿಲ್ಲ. ನಾವು ಕೇವಲ ಎರಡು ವರ್ಷದಲ್ಲಿ ಚನ್ನಪಟ್ಟಣದಲ್ಲಿ ಲೀಫ್ಟ್ ಇರಿಗೇಷನ್ ಮಾಡಿ, ನೀರನ್ನು ಕೆರೆಗಳಿವೆ ಹರಿಸಿದ್ದೆವೆ ಎಂದು ಶಿವಕುಮಾರ್ ವಿರುದ್ಧ ಹರಿಹಾಯ್ದರು.

ಕಾಂಗ್ರೆಸ್ ನಲ್ಲಿನ ನಾಯಕತ್ವದ ಪೈಪೋಟಿಯಿಂದಾಗಿ ಜನರಿಗೆ ಸುಳ್ಳಿನ ಮಾಹಿತಿ ನೀಡಲಾಗುತ್ತಿದೆ. ತಮ್ಮ ತಪ್ಪು ಮುಚ್ವಿಕೊಳ್ಳಲು ಸುಳ್ಳಿನ ಪಾದಯಾತ್ರೆ ನಡೆಸುತ್ತಿದೆ. ಕಾಂಗ್ರೆಸ್ ನ ಅಧ್ಯಕ್ಷರು ಏಳು ಭಾರಿ ಶಾಸಕರಾದವರು, ಮೊಲದ ಭಾರಿಗೆ ಶಾಸಕರಾಗಿ ಸಚಿವರಾದಂತಹ ಅನುಭವಿಗಳು. ಈಗ ಸಾವಿರಾರು‌ ಕೋಟಿ ಒಡೆಯನಾಗಿದ್ದಾನೆ. ಜನಪ್ರತಿನಿಧಿಯಾದ ಡಿಕೆಶಿ ವ್ಯವಹಾರ ನಡೆಸಲು ಸಮಯವಕಾಶ ಎಲ್ಲಿಂದ ಸಿಕ್ಕಿದೆ. ಇವರು ಜನರಿಗೆ ಏನನ್ನು ಮಾಡಿದ್ದಾರೆ ಎಂಬುದನ್ನು ಕೇಳಬೇಕು. ನಾನು ಹೇಗೆ ಹೊಡೆದುಕೊಳ್ಳಬೇಕು, ಯಾರು ಸಿಎಂ ಎನ್ನುವ ಬಗ್ಗೆ ಸಿದ್ದರಾಮಯ್ಯ ಹಾಗು ಡಿಕೆಶಿ ಒಡದಾಡುತ್ತಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಅಧಿಕಾರದಲ್ಲಿದೆ. ತಮಿಳುನಾಡಿನ ನೀರನ್ನು ನಾವು ಬಳಸುತ್ತಿಲ್ಲ. ಪ್ರತಿಯೊಂದಕ್ಕೂ ಸ್ಪಷ್ಟತೆ ಇದೆ ಎಂದು ಹೇಳಿದರು.

ಮೇಕೆದಾಟು ವಿಚಾರದ ಕೋರ್ಟ್ ನಲ್ಲಿದೆ. ಈ ವೇಳೆ ಹೋರಾಟ ಮಾಡುವುದು ತಪ್ಪು. ನಮ್ಮ ಕಾಲದಲ್ಲೇ ಮೇಕೆದಾಟು ಯೋಜನೆ ಜಾರಿಯಾಗಲಿದೆ ಎಂಬ ಭಯಕ್ಕೆ ಈ ಯೋಜನೆ ಮಾಡುವುದೆ ಬೇಡ ಎಂದು ಕಾಂಗ್ರೆಸ್ ಪಾದಯಾತ್ರೆ ಶುರು ಮಾಡಿದ್ದಾರೆ. ಕಾವೇರಿ ವಿಚಾರಕ್ಕೆ ರೈತರ ಹೋರಾಟಕ್ಕೆ ಇದೇ ಕಾಂಗ್ರೆಸ್ ತಡೆ ಹೊಡ್ಡಿದೆ. ಡಿಕೆಶಿಗೆ ಅಸ್ತಿತ್ವ ಇಲ್ಲ. ಇಡೀ ಪಕ್ಷವನ್ನೇ ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡಿದ್ದಾರೆ ಎಂದರು.

ಹಾದಿ ಬೀದಿಯಲ್ಲಿ ಜನರಿಗೆ ರೋಗ ಹರಡಿಸಿಕೊಂಡು ಓಡಾಡುತ್ತಿರುವವರು ಇವರು. ಪಾದರಾಯನ ಪುರದ ಗಲಾಟೆ ವೇಳೆ ರಾಮನಗರ ಜೈಲಿಗೆ ಆರೋಪಗಳನ್ನು ಕರೆತಂದ ವೇಳೆ, ಇಡೀ ಜಿಲ್ಲೆಗೆ ಕೋವಿಡ್ ಹಬ್ಬಿಸಿದ್ದು ಬಿಜೆಪಿ ಎಂದರು. ಈಗ ಕಾಂಗ್ರೆಸ್ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button