2 ವರ್ಷಗಳ ಬಳಿಕ ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವ: ಆರಂಭದಲ್ಲಿಯೇ ವಿಘ್ನ
ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ನಿಂತಿದ್ದ ಮೇಲುಕೋಟೆ ಶ್ರೀ ಚೆಲುವನಾರಾಯಣ ಸ್ವಾಮಿ ವೈರಮುಡಿ ಬ್ರಹ್ಮೋತ್ಸವಕ್ಕೆ ಸಾಕಷ್ಟು ಉತ್ಸಹದಿಂದಲೇ ಎಲ್ಲಾ ತಯಾರಿ ನಡೆಸಲಾಗಿದೆ. ಎರಡು ವರ್ಷಗಳ ಬಳಿಕ ಬ್ರಹ್ಮೋತ್ಸವ ನಡೆಯುತ್ತಿರುವುಕ್ಕೆ ಭಕ್ತವಲಯದಲ್ಲಿ ಸಂಭ್ರಮ ಮನೆ ಮಾಡಿದೆ. ಆದ್ರೆ ದೇವರ ವಜ್ರ ಖಚಿತ ವೈರಮುಡಿ ಕಿರೀಟ ತರುವ ವಿಚಾರದಲ್ಲಿ ದೇವಸ್ಥಾನದ ಅರ್ಚಕರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ನಡುವಿನ ಜಟಾಪಟಿಯಿಂದ ಆರಂಭದಲ್ಲಿಯೇ ಬ್ರಹ್ಮೋತ್ಸವಕ್ಕೆ ವಿಘ್ನ ಎದುರಾಗಿದೆ.
ಪ್ರತಿವರ್ಷದಂತೆ ದೇಗುಲದ ಒಂದನೇ ಅಥವಾ ನಾಲ್ಕನೇ ಸ್ಥಾನಿಕರು ದೇವರ ಕಿರೀಟವನ್ನು ತರಲು ವಾಹನದೊಂದಿಗೆ ಖಜಾನೆ ಬಳಿ ತೆರಳಬೇಕು. ಆದರೆ ಖಜಾನೆಯನ್ನ ತರಲು ಈ ಬಾರಿ ಯಾರು ಹೋಗಬೇಕು ಎಂದು ಅಧಿಕಾರಿಗಳು ಸರಿಯಾಗಿ ಸೂಚನೆ ನೀಡಲ್ಲ. ಹೀಗಾಗಿ ಗೊಂದಲ ಉಂಟಾಗಿದೆ ಅನ್ನೋ ಮಾತು ಕೇಳಿ ಬಂದಿದೆ.
ಒಂದನೇ ಸ್ಥಾನಿಕರು ಅಥವಾ ನಾಲ್ಕನೇ ಸ್ಥಾನಿಕರು ಆಭರಣಗಳನ್ನು ತರುವ ಆದೇಶವನ್ನು ಕೋರ್ಟ್ ನೀಡಿದೆ. ಆದರೆ ಎಕ್ಸಿಕ್ಯೂಟಿವ್ ಅಧಿಕಾರಿ ಹಾಗೂ ಎಸಿ ಗೊಂದಲು ಸೃಷ್ಟಿಸಿದ್ದು ದೇವರ ಆಭರಣ ಹೊತ್ತು ತರುವ ವಾಹವನ್ನ ತಡೆದು ನಾಲ್ಕನೇ ಸ್ಥಾನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀನಿವಾಸನ್ ಗುರೂಜಿ ಚೆಲುವನಾರಾಯಣ ಸ್ವಾಮಿ ದೇವಸ್ಥಾನದ ನಾಲ್ಕನೇ ಸ್ಥಾನಿಕರಾಗಿದ್ದಾರೆ.
ಹೀಗಾಗಿ ದೇವರ ವೈರಮುಡಿ ಕಿರೀಟ ಸಾಗಿಸುವ ಪರಕಾಲ ಮಠ ವಾಹನ ನಿಂತಿದೆ. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಮಂಗಳಮ್ಮ ಹಾಗೂ ಎಸಿ ಶಿವನಂದ್ ನೇತೃತ್ವದಲ್ಲಿ ವಾಹನ ಹೊರಡಬೇಕಿದೆ. ಶಾಸ್ತ್ರೋಕ್ತವಾಗಿ 7 ಗಂಟೆಗೆ ಖಜಾನೆ ತರಬೇಕಿತ್ತು. ಆದರೆ ಇದುವರೆಗೂ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳು ಸ್ಥಳಕ್ಕೆ ತೆರಳಲಿಲ್ಲ.
