Breaking NewsLatestಕಲಬುರ್ಗಿ

ಅನ್ಯಧರ್ಮದ ಯುವತಿ ಜೊತೆ ಮದುವೆ: ಯುವಕನ ಬರ್ಬರ ಹತ್ಯೆ

ಕಲಬುರಗಿ: ಚಾಕುವಿನಿಂದ ಇರಿದು ವ್ಯಕ್ತಿಯೋರ್ವನ ಬರ್ಬರ ಕೊಲೆಗೈದ ಘಟನೆ ಕಲಬುರಗಿಯ ಪಿಎನ್‌ಟಿ ಕ್ವಾಟರ್ಸ್ ಬಳಿ ತಡರಾತ್ರಿ‌ ನಡೆದಿದೆ.

ಪಿಎನ್‌ಟಿ ಕ್ವಾಟರ್ಸ್ ನಿವಾಸಿ ಪ್ರೀತಂ ಬನ್ನಿಕಟ್ಟಿ ಕೊಲೆಯಾದ ವ್ಯಕ್ತಿ. ಕೆಲ ತಿಂಗಳಷ್ಟೆ ಪ್ರೀತಂ ಅನ್ಯ ಧರ್ಮದ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದ. ಹೀಗಾಗಿ ಆತನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಕಳೆದ ರಾತ್ರಿ ಪ್ರೀತಂನನ್ನು ಕೆಲ ದುಷ್ಕರ್ಮಿಗಳು ಪಾಲೋ ಮಾಡಿ, ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬಿಸಿದ್ದಾರೆ‌.

Spread the love

Related Articles

Leave a Reply

Your email address will not be published. Required fields are marked *

Back to top button