ಅತ್ಯಾಚಾರ ಪ್ರಕರಣ: ಖ್ಯಾತ ನಟನ ಸಿನಿಮಾ ನಿರ್ದೇಶಕನ ಬಂಧನ

ಮಲಯಾಳಂ ಚಿತ್ರರಂಗದಲ್ಲಿ ಈಗ ತಾನೇ ಭವಿಷ್ಯ ಕಂಡಕೊಳ್ಳುತ್ತಿರುವ ನಿರ್ದೇಶಕ ಲಿಜು ಕೃಷ್ಣ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದ್ದು, ಪೊಲೀಸರು ಬಂಧಿಸಿದ್ದಾರೆ. ಸಿನಿಮಾದ ಶೂಟಿಂಗ್ ನಡೆಯುತ್ತಿರುವ ಸಂದರ್ಭದಲ್ಲಿಯೇ ಸೆಟ್ ಗೆ ಎಂಟ್ರಿಕೊಟ್ಟ ಪೊಲೀಸರು ಲಿಜು ಕೃಷ್ಣರನ್ನ ಬಂಧಿಸಿ ಕರೆದುಕೊಂಡು ಹೋಗಿದ್ದಾರೆ.
ಮಲಯಾಳಂನ ಖ್ಯಾತ ನಟ ನವಿನ್ ಪೌಳಿ ಹಾಗೂ ಮಂಜು ವಾರಿಯರ್ ನಟನೆಯ ಪಡವೆಟ್ಟು ಸಿನಿಮಾವನ್ನ ಲಿಜು ಕೃಷ್ಣ ನಿರ್ದೇಶನ ಮಾಡ್ತಿದ್ದಾರೆ. ಅಂದ್ಹಾಗೆ ಇದು ಲಿಜು ಕೃಷ್ಣ ಅವರ ಮೊದಲ ಸಿನಿಮಾವಾಗಿದ್ದು ಕಣ್ಣೂರಿನಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ವೇಳೆ ಲಿಜು ಕೃಷ್ಣರನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮಹಿಳೆಯೊಬ್ಬರು ಕಳೆದ ವಾರ ಲಿಜು ಕೃಷ್ಣ ವಿರುದ್ಧ ದೂರು ದಾಖಲಿಸಿದ್ದರು. ತನ್ನ ಮೇಲೆ ಕೃಷ್ಣ ಲೈಂಗಿಕ ಕಿರುಕುಳ ನೀಡಿ, ಅತ್ಯಾಚಾರ ಎಸಗಿದ್ದಾರೆ. ನನ್ನ ಒಪ್ಪಿಗೆ ಇಲ್ಲದೆ ಲೈಂಗಿಕ ಕ್ರಿಯೆ ನಡೆಸಲಾಗಿದೆ. ‘ಕಳೆದ ಎರಡು ವರ್ಷಗಳಲ್ಲಿ ನಾನಾ ಪ್ರದೇಶಗಳಲ್ಲಿ ನನ್ನ ಮೇಲೆ ಕೃಷ್ಣ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಇದರಿಂದ ನನಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ಉಂಟಾಗಿದೆ’ ಎಂದು ದೂರು ನೀಡಿದ್ದು ಮಹಿಳೆ ನೀಡಿದ ದೂರಿನ ಮೇರಿಗೆ ಪೊಲೀಸರು ಲಿಜು ಕೃಷ್ಣರನ್ನ ಬಂಧಿಸಿದ್ದಾರೆ.
‘ಲಿಜು ಕೃಷ್ಣ ನನಗೆ ಎರಡು ವರ್ಷಗಳಿಂದ ದೈಹಿಕ, ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಬಗ್ಗೆ ಯಾರಿಗೂ ಹೇಳಬಾರದೆಂದು ಬೆದರಿಕೆ ಹಾಕಿದ್ದರು. ನನಗಾದ ಅನ್ಯಾದ ಬಗ್ಗೆ ಚಿತ್ರ ತಂಡದವರ ಬಳಿ ಹೇಳಿಕೊಂಡಿದ್ದು, ಯಾವುದೇ ಪ್ರಯೋಜನವಾಗಲಿಲ್ಲ’ ಎಂದು ಸಂತ್ರಸ್ತೆ ದೂರು ಸಲ್ಲಿಸಿದ್ದಾರೆ.
ಪ್ರಕರಣದ ತೀರ್ಪು ಬರುವವರೆಗೆ ಲಿಜು ಕೃಷ್ಣ ಯಾವುದೇ ಸಿನಿಮಾ ಕೆಲಸಗಳಲ್ಲಿ ತೊಡಗದಂತೆ ನಿರ್ಬಂಧ ಹೇರಬೇಕು’ ಎಂದು ಸಂತ್ರಸ್ತೆ ಮನವಿ ಮಾಡಿದ್ದಾರೆ. ಘಟನೆ ಬಳಿಕ ‘ಪಡವೆಟ್ಟು’ ಸಿನಿಮಾದ ಶೂಟಿಂಗ್ ನಿಂತಿದ್ದು, ಈ ಸಿನಿಮಾವನ್ನು ಸನ್ನಿ ವಾಯ್ನೆ ನಿರ್ಮಾಣ ಮಾಡುತ್ತಿದ್ದಾರೆ.
