Latestಆಹಾರಲೈಫ್ ಸ್ಟೈಲ್

ರುಚಿಕರವಾದ ಕ್ಯಾರೆಟ್ ದೋಸೆ ಮಾಡಿ ನೋಡಿ

ದೋಸೆ ಅಂದರೆ ಸಾಕು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಹಲವಾರು ರೀತಿ ವಿಧಗಳಲ್ಲಿ ದೋಸೆಗಳನ್ನು ಮಾಡಲಾಗುತ್ತದೆ. ಇದೀಗ ರುಚಿಕರವಾಗಿ ಕ್ಯಾರೆಟ್ ದೋಸೆಯನ್ನು ತಯಾರು ಮಾಡಿ ನೋಡಿ. ಒಮ್ಮೆ ಕ್ಯಾರೆಟ್ ದೋಸೆ ಮಾಡುವ ಸುಲಭ ವಿಧಾನ ಇಲ್ಲಿದೆ .

ಬೇಕಾಗುವ ಸಾಮಾಗ್ರಿಗಳು
2 ರಿಂದ 3 ಕ್ಯಾರೆಟ್
ರುಬ್ಬಿದ ದೋಸೆ ಹಿಟ್ಟು 2 ಕಪ್
ಈರುಳ್ಳಿ – 3 (2 ಮಧ್ಯಮ ಮತ್ತು 1 ಚಿಕ್ಕ).
ಎಣ್ಣೆ – 2 ಚಿಕ್ಕಚಮಚ
ಜೀರಿಗೆ – 1½ ಚಮಚ
ಬೆಳ್ಳುಳ್ಳಿ- 3 ರಿಂದ 4
ಕೊತ್ತಂಬರಿ ಎಲೆಗಳು- ಸ್ವಲ್ಪ ಚಿಕ್ಕದಾಗಿ ಹೆಚ್ಚಿಕೊಳ್ಳಿ
ಮೆಣಸಿನ ಪುಡಿ – ಚಮಚ
ಹಸಿಮೆಣಸು – 2
ಉಪ್ಪು ರುಚಿಗೆ ತಕ್ಕಷ್ಟು


ಮಾಡುವ ವಿಧಾನ
2 ರಿಂದ 3 ಕ್ಯಾರೆಟ್ ​ ತೆಗೆದುಕೊಂಡು ಚನ್ನಾಗಿ ತೊಳೆದುಕೊಂಡು ಕುಕ್ಕರಿನೊಳಗೆ ಮುಳುಗುವಷ್ಟು ನೀರಿನಲ್ಲಿಟ್ಟು ಉಪ್ಪು ಹಾಕಿ ಎರಡು ಅಥವಾ ಮೂರು ಸೀಟಿ ಬರುವವರೆಗೆ ಬೇಯಿಸಿ. ಬಳಿಕ ಒಂದು ಚಿಕ್ಕ ಪಾತ್ರೆ ಅಥವಾ ಬಾಣಲೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ ಇದಕ್ಕೆ ಜೀರಿಗೆಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಬೆಳ್ಳುಳ್ಳಿ ಹಾಕಿ ಹುರಿಯಿರಿ. ಬಳಿಕ ಈರುಳ್ಳಿ ಹಾಕಿ ಕೊಂಚವೇ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಬಳಿಕ ಮೆಣಸಿನ ಪುಡಿ, ಹಸಿಮೆಣಸು, ಕೊತ್ತಂಬರಿ ಎಲೆಗಳನ್ನು ಹಾಕಿ ಹುರಿದುಕೊಳ್ಳಿ. ಅದನ್ನು ಆರಲು ಬಿಡಿ. ಎಲ್ಲ ಪದಾರ್ಥಗಳು ಆರಿದ ನಂತರ ಮತ್ತೊಮ್ಮೆ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಈಗ ಬೇಯಿಸಿದ ಕ್ಯಾರೆಟ್ ​ ತೆಗೆದುಕೊಂಡು ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ನಂತರ ಮಸಾಲೆಗಳ ಪೇಸ್ಟ್​ಗೆ ಈ ಮಿಶ್ರಣವನ್ನು ಸೇರಿಸಿ ಚನ್ನಾಗಿ ಕಲಸಿ.

ನಂತರ ಒಂದು ಪಾತ್ರೆಯಲ್ಲಿ ದೋಸೆಹಿಟ್ಟನ್ನು ಹಾಕಿ ಇದಕ್ಕೆ ಈ ಮಿಶ್ರಣವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಕೊಂಚ ಉಪ್ಪು ಸೇರಿಸಿ ಇನ್ನಷ್ಟು ಚೆನ್ನಾಗಿ ಮಿಶ್ರಣ ಮಾಡಿ. ಈಗ ಕ್ಯಾರೆಟ್ ​ ದೋಸೆ ಹಿಟ್ಟು ರೆಡಿ. ನಂತರ ದೋಸೆ ಕಾವಲಿಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಚ್ಚಿ ಕಾಯಿಸಿ. ಕಾವಲಿ ನಾನ್ ಸ್ಟಿಕ್ ಆದರೆ ಎಣ್ಣೆ ಅಗತ್ಯವಿಲ್ಲ.

ಈಗ ದೋಸೆ ಹಿಟ್ಟನ್ನು ಒಂದು ಸೌಟಿನಲ್ಲಿ ತೆಗೆದುಕೊಂಡು ಹಿಟ್ಟು ಕಾವಲಿಯ ಎಲ್ಲಾ ಕಡೆಗೆ ಆವರಿಸುವಂತೆ ಹಾಕಿ. ಹೆಚ್ಚು ತೆಳುವಾಗಿರುವಂತೆ ಮಾಡಿ. ಅಗತ್ಯ ಎನಿಸಿದರೆ ಒಂದು ಚಮಚ ಎಣ್ಣೆಯನ್ನು ಅಂಚುಗಳಿಗೆ ಹಾಕಬಹುದು. ಈ ದೋಸೆಯನ್ನು ಮುಚ್ಚಳದಿಂದ ಮುಚ್ಚಿ ಸುಮಾರು ಒಂದರಿಂದ ಎರಡು ನಿಮಿಷ ಬೇಯಲು ಬಿಡಿ.

Spread the love

Related Articles

Leave a Reply

Your email address will not be published. Required fields are marked *

Back to top button